ಭಾರತವನ್ನು ವಿಶ್ವುಗುರುವಾಗಿಸುವ ಬಜೇಟ್ :ಖೂಬಾ

ಬೀದರ:ಫೆ.2:ಕೇಂದ್ರ ಸರ್ಕಾರವು ಇಂದು ಮಧ್ಯಂತರ ಮಂಡಿಸಿರುವ ಬಜೇಟ್, ಭಾರತ ವಿಕಸಿತ ಬಜೇಟ್ ಆಗಿದೆ, ಬಡವರ, ರೈತರ, ಮಹಿಳೆಯರ ಹಾಗೂ ಯುವಕರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅಭಿವೃದ್ದಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೀಡಿರುವ ಬಜೇಟ್ ಇದಾಗಿದೆ, ಚುನಾವಣೆಗೊಸ್ಕರ್ ಸುಳ್ಳು ಭರವಸೆಗಳು, ಘೋಷಣೆಗಳು ಮಾಡದೆ ಭಾರತವನ್ನು ವಿಶ್ವುಗುರುವಾಗಿಸುವ ಬಜೇಟ್ ಮಂಡಿಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ವಿಶ್ವದ ಹಲವಾರು ಶ್ರೀಮಂತ ದೇಶಗಳು ಆರ್ಥಿಕ ಸಂಕಷ್ಟದಲ್ಲಿವೆ, ಆದರೆ ಭಾರತವು ಇವುಗಳೇಲ್ಲಾ ಮೇಟ್ಟಿ ನಿಂತು, ಅರ್ಥ ವ್ಯವಸ್ಥೆ ಸುಭದ್ರವಾಗಿಟ್ಟುಕೊಂಡಿದ್ದೇವೆ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂದಿನ ಬಜೇಟ್ ಮಂಡಿಸಲಾಗಿದೆ, ಘೋಷಣೆಯಾದ ಹೊಸ ಯೋಜನೆಗಳಿಂದ ಎಲ್ಲಾ ವರ್ಗದವರಿಗೆ ಉತ್ತಮ ಜೀವನ ನೀಡಲು ಸಾಧ್ಯವಾಗಲಿವೆ.
ಲಕಪತಿ ದಿದಿ ಯೋಜನೆಯನ್ನು 9 ಕೋಟಿ ಮಹಿಳೆಯರಿಗೆ, ಸ್ವ-ಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಯೋಜನೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ ಭಾರತ ಯೋಜನೆಯ ವಿಸ್ತರಣೆ, ಹಾಗೂ ಆರೋಗ್ಯ ವಿಮೇ ಮೂಲಕ ದೇಶದ ಮಹಿಳೆಯರಿಗೆ ಒತ್ತುನೀಡಲಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ ತಡೆಯಲು 9 ವರ್ಷದಿಂದ 14 ವರ್ಷದವರೆಗೆ ಲಸಿಕೆ, 1 ಕೋಟಿ ಬಡವರ ಮನೆಗಳಿಗೆ ಸೌರ ವಿದ್ಯುತ್ ಪ್ಯಾನೇಲ್‍ಗಳ ಅಳವಡಿಕೆ, ಬಡವರಿಗೆ 300 ಯೂನೀಟ್ ಉಚಿತ ವಿದ್ಯುತ ನೀಡಿರುವುದು ಸಂತೋಷದಾಯಕ ವಿಷಯವಾಗಿದೆ.
ಬಾಡಿಗೆ ಮತ್ತು ಸ್ವಂತ ಮನೆಯಿಲ್ಲದೆ ಇರುವವರಿಗೆ 2 ಕೊಟಿ ಮನೆಗಳ ನಿರ್ಮಾಣ, ಹೊಸ ಮೇಡಿಕಲ್ ಕಾಲೇಜುಗಳ ಸ್ಥಾಪನೆ, ಜೊತೆಗೆ ರೈಲ್ವೆ ಇಲಾಖೆಯಲ್ಲಿ ದೊಡ್ಡ ಕ್ರಾಂತಿಯನ್ನು ತರಲಾಗಿದೆ. ಪ್ರವಾಸೋದ್ಯಮ ಅಭಿವೃದ್ದಿಯಿಂದ ಉದ್ಯೋಗವಕಾಶ ಹೆರಳವಾಗಿ ದೊರೆಯಲಿವೆ, ಸದ್ಯ ಪ್ರಸಾದ ಯೋಜನೆಯಡಿ ಪಾಪನಾಶ ದೇವಸ್ಥಾನ ಅಭಿವೃದ್ದಿಗೋಳ್ಳುತ್ತಿದೆ, ಮುಂದಿನ ದಿನಗಳಲ್ಲಿ ಝರಾ ನರಸಿಂಹ ಸ್ವಾಮಿ ಹಾಗೂ ಇತರೆ ದೇವಸ್ಥಾನಗಳು ಅಭಿವೃದ್ದಿಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಭಾರತವನ್ನು ಆರ್ಥಿಕವಾಗಿ ಸಧೃಢಗೊಳಿಸುವತ್ತ, ಅಭಿವೃದ್ದಿಯಲ್ಲಿ ಮುಂದೆ ಸಾಗಿಸುವ ಉದ್ದೇಶದಿಂದ ಇದೊಂದು ಅತ್ಯುತ್ತಮ ಬಜೇಟ್ ಮಂಡಿಸಲಾಗಿದೆ, ಪ್ರಯುಕ್ತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಜಿಯವರಿಗೆ ಹಾಗೂ ಜನಹಿತ ಹಾಗೂ ಅಭಿವೃದ್ಧಿಯ ಬಜೇಟ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ. ನಿರ್ಮಲಾ ಸಿತಾರಾಮನ್ ಜಿಯವರಿಗೆ ಕೇಂದ್ರ ಸಚಿವರಾದ ಶ್ರೀ ಭಗವಂತ ಖೂಬಾರವರು ಧನ್ಯವಾದಗಳು ತಿಳಿಸಿದ್ದಾರೆ.