ಭಾರತವನ್ನು ವಿಶ್ವಗುರುವನ್ನಾಗಿಸಿ ಮುನ್ನಡೆಯಬೇಕು: ಸೂಯಶಸಿಂಹ್

ಭಾಲ್ಕಿ: ಜ.13:ಭಾರತೀಯ ಪರಂಪರೆಯನ್ನು ಜಗತ್ತಿಗೆ ತಿಳಿಸುವುದರೋಂದಿಗೆ, ನಮ್ಮ ಯುವ ಜನರಲ್ಲಿ ರಾಷ್ಟ್ರೀಯತೆ ಮನೆಮಾಡುವಂತೆ ಮಾಡುವುದೇ ಫೌಂಡೇಶನ್ ಮೂಲ ಉದ್ದೇಶವಾಗಿದೆ ಎಂದು ವಿಶ್ವ ಗೌರವ ಶಿವಸ್ವರಾಜ ರಥ ಸಮಿತಿಯ ಅಧ್ಯಕ್ಷ ಮಹಾರಾಣಾ ಸೂಯಶಸಿಂಹ ಹೇಳಿದರು.
ಪಟ್ಟಣದ ಶಿವಾಜಿ ವೃತ್ತದಲ್ಲಿ ಶುಕ್ರವಾರ ಶಿವ ಸ್ವರಾಜ ರಥ ಸಮಿತಿಯ ರಾಷ್ಟ್ರೀಯ ಪ್ರಚಾರಕ ಜನಾರ್ಧನ ಪಾಟೀಲರ ನೇತೃತ್ವದಲ್ಲಿ ಜಾಗೋ ಭಾರತ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯತಾ ಅಭಿಯಾನ ರಥಯಾತ್ರಾ ಪ್ರಯಾಣದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ದೇಶವನ್ನು ವಿಶ್ವಗುರುವಾಗಿ ಪರಿಣಮಿಸುವ ನಿಟ್ಟಿನಲ್ಲಿ, ಯುವ ಸಮುದಾಯವನ್ನು ಮುನ್ನಡೆಸಬೇಕಿದೆ. ನಮ್ಮ ದೇಶದ ಪರಂಪರೆ ಮತ್ತು ರಾಷ್ಟ್ರೀಯ ನಾಯಕರಾದ ಶಿವಾಜಿ ಮಹಾರಾಜರು, ಮಹಾತ್ಮಾ ಬಸವೇಶ್ವರರು, ಶಾಹು ಮಹಾರಾಜರು ಸೇರಿದಂತೆ ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಿದ ಅನೇಕ ಮಹಾತ್ಮರ ತತ್ವಾದರ್ಶಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಿದೆ. ಹೀಗಾಗಿ ಇಂದಿನಿಂದ ಮಹಾರಾಷ್ಟ್ರದ ಲಾತೂರಿನಿಂದ ದೇಶದ 15 ರಾಜ್ಯಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಶಿವಸ್ವರಾಜ ರಥ ಸಮಿತಿಯ ರಾಷ್ಟ್ರೀಯ ಪ್ರಚಾರಕ ಜನಾರ್ಧನ ಪಾಟೀಲ ಮಾತನಾಡಿ, ವಿಶ್ವ ಶಾಂತಿಯಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ. ಅನಾದಿಕಾಲದಿಂದಲೂ ಜಗತ್ತಿಗೆ ಶಾಂತಿ ಸಂದೇಶ ಮೂಡಿಸಿದ ದೇಶ ಭಾರತವಾಗಿದೆ. ಹೀಗಾಗಿ ನಾವೆಲ್ಲರೂ ಸೇರಿ ಮತ್ತೆ ಜಗತ್ತಿನ ಶಾಂತಿಗಾಗಿ ದುಡಿಯೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಮ್.ಜಿ.ಮುಳೆ, ಬಿಹಾರ ಎಮ್‍ಎಲ್‍ಎ ಪ್ರೇಮ ಸಿಂಗ್, ಡಾ| ವೈಶಾಲಿ ಜಾಧವ, ಮಹಾರಾಷ್ಟ್ರದ ಮಾಜಿ ರಾಜಸಭಾ ಸದಸ್ಯ ಗೊಪಾಳರಾವ ಪಾಟೀಲ, ಜಿಪಂ ಮಾಜಿ ಸದಸ್ಯ ಯಾದವರಾವ ಕನಸೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ, ಮರಾಠಾ ಮುಖಂಡ ವೈಜಿನಾಥ ತಗಾರೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಹಂಸರಾಜ ನರಸಿಂಗರಾವ ಘುಗರೆ, ತುಕಾರಾಮ ಮೋರೆ, ಕಿಶನರಾವ ಇಂಚೂರಕರ, ಪ್ರತಾಪ ಪಾಟೀಲ, ಸೂರಜಸಿಂಗ್ ರಜಪೂತ, ನಾಮದೇವರಾವ ಪವಾರ, ಜೀಜಾವು ಬ್ರಿಗೆಡ್‍ನ ಮಹಿಳಾ ಪ್ರತಿನಿಧಿಗಳಾ ಡಾ| ಕೃತಿಕಾ ಪಾಟೀಲ, ಡಾ| ನಿರ್ಮಲಾ ಶೇಡೋಳೆ, ರಂಜನಾ ಕಾಟಕರ ಉಪಸ್ಥಿತರಿದ್ದರು.
ತುಕಾರಾಮ ಮೋರೆ ಸ್ವಾಗತಿಸಿದರು. ದತ್ತು ಕಾಟಕರ ನಿರೂಪಿಸಿದರು. ವೈಜಿನಾಥ ತಗಾರೆ ವಂದಿಸಿದರು.