ಭಾರತವನ್ನು ವಿಶ್ವಕ್ಕೆ ಪರಿಚಯಿಸಿದವರು ವಿವೇಕಾನಂದರು: ತಹಸಿಲ್ದಾರ ಹಿರೇಮಠ

ಹುಮನಾಬಾದ್:ಜ.12:ಭಾರತವನ್ನು ವಿಶ್ವಕ್ಕೆ ಪರಿಚಯಿಸಿದವರು ಜಗತ್ ಸನ್ಯಾಸಿ ಸ್ವಾಮಿ ವಿವೇಕಾನಂದರು ಎಂದು ತಹಸಿಲ್ದಾರ ಡಾ.ಪ್ರದೀಪ ಹಿರೇಮಠ ತಿಳಿಸಿದರು.
ಶುಕ್ರವಾರ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಅವರಣದಲ್ಲಿ ಭಾರತ ಸರಕಾರದ ಯುವ ವ್ಯವಹಾರಗಳ ಹಾಗೂ ಕ್ರೀಡಾ ಸಚಿವಾಲಯದ ಇಲಾಖೆಯಾದ ನೆಹರು ಯುವ ಕೇಂದ್ರ ಬೀದರ್, ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಕಾಳಸರ ತುಗಾಂವ, ಬಕ್ಕಪ್ರಭು ಯುವಕ ಸಂಘ ಕಾರಪಾಕಪಳ್ಳಿ ಹಾಗೂ ಬಸವತೀರ್ಥ ವಿದ್ಯಾಪೀಠ ಮಹಾವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಜೊತೆಗೆ ಜಿಲ್ಲೆಯ ಆಯ್ದ ಯುವ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವ ಅಂಗವಾಗಿ ರಾಷ್ಟ್ರೀಯ ಯುವದಿನ ಹಾಗೂ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರೆಂದರೆ ಭಾರತ, ಭಾರತವೆಂದರೆ ವಿವೇಕಾನಂದರು ಎನ್ನುವ ವಾತಾವರಣ ಆ ಕಾಲದಲ್ಲಿ ನಿರ್ಮಾಗೊಂಡಿತ್ತು. ಅಂತಹ ಮಹಾತ್ಮರ ಬೀಡಾದ ನಮ್ಮ ಭಾರತದಲ್ಲಿ ಯುವ ಜನರು ದೈಹಿಕವಾಗಿ ಸಧೃಢರಾಗಿ ಮಾನಸಿಕವಾಗಿ ಚುರುಕ್ಕಾಗಿ ಪರಸ್ಪರ ಸಮಾಜದಲ್ಲಿ ಪ್ರೀತ-ವಿಶ್ವಾಸಗಳಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸಾನಿಧ್ಯವಹಿಸಿದ ಸ್ಥಳೀಯ ಚಿಕ್ಕಮಠದ ಪೂಜ್ಯ ಶ.ಬ್ರ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ವಿವೇಕಾನಂದರು ಕೇವಲ ತಮ್ಮ ಆದರ್ಶ ಗುಣಗಳಿಂದ ಜನಪ್ರಿಯತೆ ಪಡೆಯದೆ ತಮ್ಮ ಸಂದೇಶ ಹಾಗೂ ವಾಕ್ ಚಾತುರ್ಯದಿಂದ ಜಗತ್ತು ಗೆದ್ದಿದ್ದರು. ಈ ದೇಶದ 45 ಕೋಟಿಗೂ ಅಧಿಕ ಯುವ ಜನತೆ ವಿವೇಕಾನಂದರ ವಾರಸುದಾರರಾಗಿದ್ದು, ಅವರ ತತ್ವಾದರ್ಶ ಹಾಗೂ ನುಡಿಗಳಲ್ಲಿ ನಂಬಿಕೆ ಇಟ್ಟು ಸಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ ಬಸವತೀರ್ಥ ವಿದ್ಯಾಪೀಠ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಕೇಶವರಾವ ತಳಘಟಕರ್ ಅವರು ಮಾತನಾಡಿ, ಭಾರತ ಯುವ ಸಂಪದ್ಭರಿತ ದೇಶವಾಗಿದ್ದು, ಜಗತ್ತಿನ 200ಕ್ಕೂ ಅಧಿಕ ದೇಶಗಳಲ್ಲಿ ಭಾರತದ ಯುವ ಜನತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ವಿವೇಕಾನಂದರ ಪ್ರೇರಣೆ ಮುಖ್ಯಕಾರಣವೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ರಾಜಕುಮಾರ ಪಸಾರ ಮಾತನಾಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವತೀರ್ಥ ಕಾಲೇಜಿನ ಪ್ರಾಚಾರ್ಯ ಮಸ್ತಾನ್ ಪಟೇಲ್ ಸ್ವಾಗತಿಸಿದರು. ಅಲ್ಲಿಯ ಎನ್.ಎಸ್.ಎಸ್.ಘಟಕದ ಸಂಯೋಜನಾಧಿಕಾರಿ ನರೇಂದ್ರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಂಗಮೇಶ ಪಾಟೀಲ ವಂದಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಗುಂಡಯ್ಯ ತೀರ್ಥ, ಬಸವ ತೀರ್ಥ ವಿದ್ಯಾಪೀಠದ ಸ್ಥಳೀಯ ಅಧ್ಯಕ್ಷ ಸೋಮಯ್ಯ ಹಿರೇಮಠ, ಸ್ಥಳೀಯ ಮುಖಂಡ ವಿಷ್ಣುಕಾಂತ ಡೋಳೆಕರ್, ಯುವ ಸ್ಪಂದನದ ಆಪ್ತ ಸಮಾಲೋಚಕಿ ಜಯಶ್ರೀ ಮೇತ್ರೆ ವೇದಿಕೆಯಲ್ಲಿದ್ದರು. ಬಸವ ತೀರ್ಥ ವಿದ್ಯಾಪೀಠದ ಎಲ್ಲ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.