ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ ಆಚರಣೆ

ದಾವಣಗೆರೆ, ಸೆ. ೧೬; ವ್ಯಕ್ತಿ ನಿರತ ವಾಸ್ತು ಶಿಲ್ಪಿ ಮತ್ತು ಅಭಿಯಂತರರ ಸಮೂಹ (ರಿ.), ಅಸೋಸಿಯೇಷನ್ ಆಪ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀರ‍್ಸ್ (ಇಂಡಿಯ) ಮತ್ತು ಇನ್ಸ್ಟ್ರಕ್ಟ್ ದಾವಣಗೆರೆ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯರವರ ೧೬೦ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಇಂಜಿನೀರ‍್ಸ್ ದಿನಾಚರಣೆ ೨೦೨೦ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ದೇವೇಂದ್ರಪ್ಪ ಮಾಜಿ ಅಧ್ಯಕ್ಷರುಗಳಾದ ಲೋಹಿತಾಶ್ವ, ಆರ್.ಎಸ್. ವಿಜಯಾನಂದ, ಹೆಚ್.ವಿ. ಮಂಜುನಾಥಸ್ವಾಮಿ, ಎ.ಬಿ. ರವಿ, ಸಂಸ್ಥೆಯ ಪದಾಧಿಕಾರಿಗಳಾದ ಪ್ರಕಾಶ್ ಮೂಲೆ, ಡಬ್ಲೂö್ಯ.ಆರ್. ಕೊಟ್ರೇಶ್, ಆನಂದ ಷಾ, ವೆಂಕಟರೆಡ್ಡಿ, ಸಮೀರ್, ಜಗದೀಶ್ ಕೆ.ಎಂ. ಪರಮೇಶ್ವರಪ್ಪ, ಆದರ್ಶ ಮತ್ತಿತರರು ಪಾಲ್ಗೊಂಡಿದ್ದರು.