
ವಿಜಯಪುರ:ಮೇ.22: ಭಾರತದ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿಜಿಯವರ ಪುಣ್ಯತಿಥಿಯನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ರಾಜೀವ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಜೀವ ಗಾಂಧಿಯವರು ದೇಶಕ್ಕಾಗಿ ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು. ರಾಜೀವ ಗಾಂಧಿಯವರು ಆಧುನಿಕ ಭಾರತದ ರೂವಾರಿಗಳು. ಪಂಚಾಯತ ರಾಜ್, ಮಹಿಳಾ ಮೀಸಲಾತಿ, ಯುವಕರಿಗೆ 18 ವರ್ಷಕ್ಕೆ ಮತದಾನ, ಕಂಪ್ಯೂಟರ್, ಮೊಬೈಲ್ ಸೇರಿದಂತೆ ಅನೇಕ ಕ್ರಾಂತಿಕಾರಕ ಕೆಲಸಗಳನ್ನು ಮಾಡಿದ್ದಾರೆ. ಅವರೊಬ್ಬ ದೂರದೃಷ್ಠಿಯುಳ್ಳ ನಾಯಕರಾಗಿದ್ದರು.
ಈ ಸಂದರ್ಬದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ್ ಕಾಲೇಬಾಗ್, ಅಪ್ಜಲ್ ಜಾನವೇಕರ, ನಿಂಗಪ್ಪಾ ಸಂಗಾಪೂರ, ಹಾಜಿಲಾಲ ದಳವಾಯಿ, ಇಲಿಯಾಸ ಅಹ್ಮದ ಸಿದ್ದಖಿ ತಾಜುದ್ದೀನ ಖಲೀಫಾ, ಮಹ್ಮದ ಮುಲ್ಲಾ, ಹಾಗೂ ಮುಂತಾದ ಪಕ್ಷದ ಕಾರ್ಯಕರ್ತರು ಹಾಜರಿದ್ದರು.