ಭಾರತರತ್ನ ದಿ ಕರ್ಪೂರಿ ಠಾಕೂರ್ ಜಯಂತೋತ್ಸವ ಆಚರಣೆ

ಕಲಬುರಗಿ, ಜ,27: ಜಿಲ್ಲಾ ಸವಿತಾ ಸಮಾಜ ರಾಮನಗರ ಕಾರ್ಯಾಲಯದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜನನಾಯಕ ದಿವಂಗತ ಕರ್ಪೂರಿ ಠಾಕೂರ್ ಜೀ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಅವರ 100 ನೇ ಜಯಂತೋತ್ಸವ ಆಚರಣೆ ಮಾಡಲಾಯಿತು ಇತ್ತೀಚಿನ ದಿನಗಳಲ್ಲಿ ರಾಜಕೀಯ ಸ್ಥಾನಮಾನ ವಂಚಿತ
ಸವಿತಾ ಸಮುದಾಯಕ್ಕೆ ಅವರ ರಾಜಕೀಯ ಸೇವೆ ಗುರುತಿಸಿ ಮರಣೋತ್ತರ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಿದ್ದು ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಇದೆ ಸಂದರ್ಭದಲ್ಲಿ ವಿಭಾಗೀಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಸವಿತಾ ಸಮಾಜ ಯುವಕ ಸಂಘದ ಜಿಲ್ಲಾಧ್ಯಕ್ಷ ಆನಂದ ವಾರಿಕ ಕಲಬುರಗಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶರಣಬಸಪ್ಪ ಎಂ ಸೂರ್ಯವಂಶಿ ನೌಕರರ ಸಂಘದ ಅಧ್ಯಕ್ಷ ಗಣೇಶ್ ಚಿನ್ನಾಕರ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಅಡಿಕೆ ಹಿರಿಯರಾದ ಅಶೋಕ್ ಡೈಮಂಡ್ ಗಂಗಾಧರ ಮುಂದಿನಮನಿ ರಾಜೇಂದ್ರ ಅಷ್ಟಿ ಮಲ್ಲಣ್ಣ ಗೋಗಿ ಶರಣಬಸ್ಸಪ್ಪ ವೈಧ್ಯ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ ನಾಗಪ್ಪ ಗೋಗಿ ಮಹೇಶ ಉಜ್ಜಲಿಕರ ಮಹೇಶ ಪಾಣೆಗಾಂವ ವೆಂಕಟೇಶ್ ದೊರೆಪಲ್ಲಿ ಸೂರ್ಯಕಾಂತ ಬೆಣ್ಣೂರು ಚಂದ್ರು ಗೋಗಿ ಮಹೇಶ ಪಾಣೆಗಾಂವ ಅನೀಲ ಗೋಗಿ ಪ್ರಕಾಶ್ ಹುಣಸಿಗೇರಾ ನೌಕರರ ಸಂಘದ ಪದಾಧಿಕಾರಿಗಳು ಯುವಕ ಸಂಘದ ಪದಾಧಿಕಾರಿಗಳು ಮಹಿಳಾ ಘಟಕದ ಪದಾಧಿಕಾರಿಗಳು ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.