ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ ರ 132ನೇ ಜಯಂತ್ಯುತ್ಸವ

ಕಲಬುರಗಿ,ಏ.15: ನಗರದ ನೂತನ ವಿದ್ಯಾಲಯ ಸಂಸ್ಥೆಯ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್.ಘಟಕದವತಿಯಿಂದ ದಿನಾಂಕ ಶುಕ್ರವಾರ ರಂದು ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ ರ 132ನೇ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಕನ್ನಡ ವಿಷಯದ ಪ್ರಾಧ್ಯಾಪಕÀ ಡಾ.ಮಲ್ಲಿನಾಥ ತಳವಾರ ಅವರು ಡಾ.ಅಂಬೇಡ್ಕರ ಅವರ ಸಮಗ್ರಜೀವನದ ಬಗ್ಗೆ ವಿಸ್ತಾರವಾಗಿ ವಿವರಿಸಿದರು.
ಪ್ರಾಚಾರ್ಯÀ ಡಾ.ವೆಂಕಟೇಶ ಕುಲಕರ್ಣಿ ಅವರು ಅಧ್ಯಕ್ಷತೆಯ ನುಡಿಗಳಲ್ಲಿ ಡಾ.ಅಂಬೇಡಕರರು ತಮ್ಮ ಹೆಚ್ಚಿನ ವಿದ್ಯಾಭ್ಯಾಸವನ್ನು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ, ಪೂರೈಸಿದ ಕುರಿತು ಸಮಗ್ರ ಮಾಹಿತಿಯನ್ನು ಸಭಿಕರಿಗೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಎನ್.ಎಸ್.ಎಸ್.ಘಟಕದ ಅಧಿಕಾರಿ ಹಾಗೂ ಉಪ ಪ್ರಾಚಾರ್ಯÀ ಡಾ.ದಯಾನಂದ ಶಾಸ್ತ್ರಿ ಅವರು ಅಂಬೇಡಕರರ ದೇಶಭಕ್ತಿ ಹಾಗೂ ಸ್ತ್ರೀಮುಕ್ತಿ ಬಗ್ಗೆ ನೀಡಿದ ಕೊಡುಗೆಯನ್ನು ವಿವರಿಸಿದರು.
ಪ್ರೊ.ಸುತೇಜ ಎ. ದೇಶಮುಖ ಅವರು ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು. ಪ್ರೊ.ಮಹೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಪ್ರೊ ಕೃಷ್ಣಾಬೋರಗಾಂವಕರ ಅವರು ವಂದಿಸಿದರು. ಮಹಾವಿದ್ಯಾಲಯದ ಸಕಲ ಉದ್ಯೋಗಿಬಾಂಧವರು ಉಪಸ್ಥಿತರಿದ್ದರು.