ಭಾರತದ ೩.೮ ಶತಕೋಟಿ ಲಸಿಕೆ ಹನಿಗೆ ಬೇಡಿಕೆ

ನವದೆಹಲಿ, ನ. ೨- ಕೊರೊನಾ ಸೋಂಕಿಗೆ ಲಸಿಕೆ ಬರುವ ಮುನ್ನವೇ ಜಗತ್ತಿನ ವಿವಿಧ ದೇಶಗಳು ಭಾರತದಿಂದ ೩.೮ ಶತಕೋಟಿ ಡೋಸ್ ಲಸಿಕೆಯನ್ನು ಖರೀದಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ.
ಅಭಿವೃದ್ಧಿ ಹೊಂದಿರುವ ದೇಶಗಳು ಮತ್ತು ಹೆಚ್ಚು ಆದಾಯ ಹೊಂದಿರುವ ದೇಶಗಳ ಜತೆಗೆ ಮಧ್ಯಮ ಆದಾಯ ಹೊಂದಿರುವ ದೇಶಗಳು ಭಾರತದ ಔಷಧ ತಯಾರ ಸಂಸ್ಥೆಗಳಿಂದ ಅಪಾರ ಪ್ರಮಾಣದ ಲಸಿಕೆಯನ್ನು ಈಗಾಗಲೇ ಖರೀದಿ ಮಾಡಬೇಕೆಂದು ಜಾಗತಿಕ ಅಧ್ಯಯನ ತಿಳಿಸಿದೆ.
ಭಾರತ ೫೦ ಕೋಟಿ ಲಸಿಕೆಯಿಂದ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಈಗಾಗಲೇ ೬೦೦ ದಶಲಕ್ಷ ಡೋಸ್ ಲಸಿಕೆಗೆ ಆರ್ಡರ್ ಪಡೆದಿದೆ ಎಂದು ತಜ್ಞರು ಹೇಳಿದ್ದಾರೆ.
ಅಮೆರಿಕ ೮೧೦ ದಶಲಕ್ಷ ಡೋಸ್ ಪಡೆಯುವುದಾಗಿ ಹೇಳಿದೆ.
ಜಗತ್ತಿನ ಎಲ್ಲ ಜನರಿಗೆ ಕೊರೊನಾ ಲಸಿಕೆಯನ್ನು ತಲುಪುವಂತೆ ಮಾಡಲು ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಕಾಲ ಬೇಕಾಗಲಿದೆ. ಈ ನೆಲೆಯಲ್ಲಿ ಅತಿ ಹೆಚ್ಚು ಆದಾಯವಿರುವ ದೇಶಗಳು ಮತ್ತು ಮಧ್ಯಮ ಆದಾಯವಿರುವ ದೇಶಗಳು ಭಾರತದಂತಹ ದೇಶಗಳಿಂದ ಲಸಿಕೆಯನ್ನು ಕರೆದು ಮಾಡಲು ಮುಂದಾಗಿದ್ದು ಇದುವರೆಗೂ ೩.೮ ಶತಕೋಟಿ ಡೋಸ್ ಲಸಿಕೆಗೆ ಒಪ್ಪಂದ ಮಾಡಿಕೊಂಡಿವೆ.
ಅಮೆರಿಕದಲ್ಲಿ ೮೧೦ ದಶಲಕ್ಷ ಡೋಸ್ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಇದೀಗ ಮತ್ತೆ ೧.೬ ಶತಕೋಟಿ ಡೋಸ್ ಖರೀದಿ ಒಪ್ಪಂದ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿವೆ.
ಅಮೆರಿಕವನ್ನು ಹೊರತುಪಡಿಸಿದರೆ ಭಾರತದಲ್ಲಿ ೬೦೦ ದಶ ಲಕ್ಷ ಡೋಸ್ ಈಗಾಗಲೇ ಲಸಿಕೆ ಪೂರೈಕೆ ಮಾಡಲು ಸಿದ್ದತೆ ನಡೆದಿದ್ದು ಇದರ ಜೊತೆಗೆ ಇನ್ನೊಂದು ಶತಕೋಟಿ ಡೋಸ್ ಲಸಿಕೆಗಾಗಿ ಮಾತುಕತೆಗಳು ಮುಂದುವರಿಸಿದೆ.
ಯುರೋಪಿಯನ್ ಒಕ್ಕೂಟದ ದೇಶಗಳು ೪೦೦ ದಶಲಕ್ಷ ಡೋಸ್ ಈಗಾಗಲೇ ಖಚಿತಪಡಿಸಿದ್ದು ಇನ್ನು .೧.೫೬೫ ಶತಕೋಟಿ ಡೋಸ್ ಲಸಿಕೆ ಪಡೆಯುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಕೆನಡಾದಲ್ಲಿ ಈಗಾಗಲೇ ತನ್ನ ದೇಶದ ನಾಗರಿಕರಿಗಾಗಿ ೫೨೭ ಲಸಿಕೆಯನ್ನು ಖರೀದಿಸುವಪ್ರಕ್ರಿಯೆಯಲ್ಲಿ ನಿರತವಾಗಿದೆ. ಇಂಗ್ಲೆಂಡ್ನಲ್ಲಿ ಶೇಕಡ ೨೭೭ ರಷ್ಟು ಮಂದಿಗೆ ಲಸಿಕೆ ಪಡೆಯುವುದಾಗಿ ಅಲ್ಲಿನ ಆರೋಗ್ಯ ಸಚಿವರು ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ಸೌಂಡಿಗೆ ಲಸಿಕೆ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ವಿವಿಧ ಔಷಧ ತಯಾರಿಕಾ ಸಂಸ್ಥೆಗಳು ನಿರತರಾಗಿವೆ.
ಅದರಲ್ಲೂ ಕೊನೆಯಲ್ಲಿರುವ ಭಾರತೀಯ ಸೆರಂ ಸಂಸ್ಥೆ, ಲಸಿಕೆಯ ಉತ್ಪಾದನೆಯಲ್ಲಿ ಮುಂಚೂಣಿ ಪಾತ್ರ ವಹಿಸಿದೆ.