ಭಾರತದ ಸಮುದ್ರ ಕಾವಲು ಮಾರಿಷಸ್‌ಗೆ ವಿಸ್ತರಣೆ

ನವದೆಹಲಿ,ಸೆ.೨೨- ಹಿಂದೂ ಮಹಾಸಾಗರ ಪ್ರದೇಶದ ಮೇಲ್ವಿಚಾರಣೆ ಮಾಡಲು ಭಾರತ ಸಮುದ್ರ ಕಾವಲನ್ನು ಓಮನ್ ಮತ್ತು ಮಾರಿಷಸ್‌ವರೆಗೆ ವಿಸ್ತರಿಸಿದೆ.
ಮಿತ್ರರಾಷ್ಟ್ರಗಳಾದ ಓಮನ್ ಮತ್ತು ಮಾರಿಷಸ್‌ನೊಂದಿಗೆ, ಭಾರತ ಪೋರ್ಟ್ ಡುಕ್ಮ್ ಮತ್ತು ಅಗಲೆಗಾ ದ್ವೀಪಗಳು,ಪೊ?ರ್ಟ್ ಲೂಯಿಸ್‌ಗೆ ಉತ್ತಮ ಕಡಲ ತೀರದಲ್ಲಿ ಅರಿವು ಮತ್ತು ಕರಾವಳಿ ಭದ್ರತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಓಮನ್‌ನ ಡುಕ್ಮ್ ಬಂದರಿನಲ್ಲಿ ಕಡಲ ಬೆಂಬಲ ನೆಲೆ ಸ್ಥಾಪಿಸುವ ಮೂಲಕ ಭಾರತ ತನ್ನ ಸಮುದ್ರದ ಕಾವಲುಗಳನ್ನು ವಿಸ್ತರಿಸಿದೆ ಮತ್ತು ಸೀಶೆಲ್ಸ್‌ನ ದಕ್ಷಿಣದ ಉತ್ತರ ಅಗಾಲೆಗಾ ದ್ವೀಪಗಳಲ್ಲಿ ವಾಯು ಬೆಂಬಲ ಸೌಲಭ್ಯ ಸ್ಥಾಪಿಸುವ ಮೂಲಕ ನಿಕಟ ಮಿತ್ರ ಮಾರಿಷಸ್‌ಗೆ ಬೆಂಬಲ ನೀಡಲು ತಯಾರಿ ನಡೆಸುತ್ತಿದೆ.
ಕಡಲ ತೀರದ ಭದ್ರತೆ ಅರಿವು ಮತ್ತು ಕರಾವಳಿ ಭಾಗದ ಸುಧಾರಿಸುವ ಗುರಿ ಹೊಂದಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸ್ನೇಹಪರ ರಾಷ್ಟ್ರಗಳ ಭದ್ರತೆ, ವಿಶೇಷವಾಗಿ ಈ ಪ್ರದೇಶದಲ್ಲಿ ಬೀಜಿಂಗ್ ಬೆಳೆಯುತ್ತಿರುವ ಉಪಸ್ಥಿತಿಯಲ್ಲಿ ಸಹಕಾರಿಯಾಗಲಿದೆ ಎನ್ನಲಾಗಿದೆ,
ಚೀನಾದ ಕಣ್ಗಾವಲು ನೌಕೆ ಶಿ ಯಾನ್ ಹಿಂದೂ ಮಹಾಸಾಗರ ಪ್ರದೇಶಿಸಿದ್ದು ಸೆಪ್ಟೆಂಬರ್ ೨೯ ರಂದು ಕೊಲಂಬೊದಲ್ಲಿ ಡಾಕ್ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಭಾರತದ ನಡೆ ಕುತೂಗಲ ಕೆರಳಿಸಿದೆ.
ಈ ಎರಡು ಮಹತ್ವದ ಬೆಳವಣಿಗೆಗಳ ಬಗ್ಗೆ ಭಾರತೀಯ ಹಡಗುಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆಗೆ ಮತ್ತು ಭಾರತೀಯ ನೌಕಾಪಡೆಯ ಹಡಗುಗಳಿಗೆ ನಿಲುಗಡೆ, ಇಂಧನ ಮತ್ತು ವಿಶ್ರಾಂತಿ ಸೌಲಭ್ಯಗಳನ್ನು ಒದಗಿಸಲು ಓಮನ್‌ನ ಡುಕ್ಮ್ ಬಂದರಿನಲ್ಲಿರುವ ಸೌಲಭ್ಯ ಈಗಾಗಲೇ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಭಾರತ ಪ್ರಮುಖ ಮಿತ್ರರಾಷ್ಟ್ರ ಮಾರಿಷಸ್‌ಗೆ ಬೆಂಬಲವಾಗಿ, ಪೋರ್ಟ್ ಲೂಯಿಸ್‌ನಿಂದ ಸುಮಾರು ೧,೦೫೦ ಕಿಮೀ ಉತ್ತರದಲ್ಲಿರುವ ಉತ್ತರ ಅಗಾಲೆಗಾ ದ್ವೀಪಗಳಲ್ಲಿ ದ್ವೀಪ ರಾಷ್ಟ್ರಕ್ಕೆ ಕಡಲ ಭದ್ರತೆ ಒದಗಿಸಲು ಮತ್ತು ಈ ಪ್ರದೇಶದಲ್ಲಿ ತನ್ನ ಪ್ರವಾಸೋದ್ಯಮ ಆಸ್ತಿ ರಕ್ಷಿಸಲು ಸಹಾಯ ಮಾಡಲು ವಾಯುನೆಲೆಯನ್ನೂ ನಿರ್ಮಿಸಿದೆ.
ಡಿಸೆಂಬರ್‌ನಲ್ಲಿ ಮುಕ್ತ
ಮಾರಿಷಸ್ ಸರ್ಕಾರದ ಅಡಿಯಲ್ಲಿನ ಸೌಲಭ್ಯವನ್ನು ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರು ಡಿಸೆಂಬರ್‍ನಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ
ಭಾರತೀಯ ನೌಕಾಪಡೆಯು ಈಗಾಗಲೇ ಕನಿಷ್ಠ ೫೦ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಾಯುನೆಲೆಗೆ ಕಳುಹಿಸಲು ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಭಾರತೀಯ ಸಶಸ್ತ್ರ ಪಡೆಗಳ ಬೋಯಿಂಗ್ ಪಿ-೮೧ ಕಣ್ಗಾವಲು ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನ ನಿರ್ವಹಿಸುವುದು ಇದರ ಉದ್ದೇಶವಾಗಿದೆ.