ಭಾರತದ ಸತ್ಪ್ರಜೆಗಳನ್ನಾಗಿ ಮಾಡ ಬೇಕಿದೆ

ಕೋಲಾರ,ಏ,೬-ಬಾಬು ಜೀವನ್ ರಾಮ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದರ ಜೂತೆಗೆ ಮುಂದಿನ ಪೀಳಿಗೆಗಳಿಗೂ ಅರಿವು ಮೂಡಿಸುವ ಮೂಲಕ ಭಾರತದ ಸತ್ಪ್ರಜೆಗಳನ್ನಾಗಿ ಮಾಡ ಬೇಕೆಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದರು.
ನಗರದ ಟಿ ಚೆನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್ ಅವರ ೧೧೬ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ೧೯೦೭ರಲ್ಲಿ ಬಿಹಾರದಲ್ಲಿ ದಲಿತ ಕುಟುಂಬದಲ್ಲಿ ಜನಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶದಲ್ಲಿ ಕೃಷಿ ಸಚಿವರಾಗಿ ಅಧುನಿಕ ತಂತ್ರಜ್ಞಾನದ ಯಂತ್ರಗಳ ಮೂಲಕ ಆಹಾರ ಉತ್ಪನ್ನಗಳನ್ನು ಅಭಿವೃದ್ದಿ ಪಡೆಸಿ ದೇಶದ ಅಹಾರ ಸಮಸ್ಯೆಯನ್ನು ನೀಗಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂಬ ಖ್ಯಾತಿ ಪಡೆದರು ಎಂದು ಹೇಳಿದರು.
ಇಷ್ಟೆ ಅಲ್ಲದೆ ರಕ್ಷಣ ಸಚಿವರಾಗಿ ದೇಶದ ಸೈನ್ಯವನ್ನು ಸಧೃಡವಾಗಿ ಸಂಘಟಿಸಿದರು, ಕಾರ್ಮಿಕ ಸಚಿವರಾಗಿ ಕೈಗಾರಿಕೆಗಳನ್ನು ಅಭಿವೃದ್ದಿ ಪಡೆಸಿದರು, ನಿರುದ್ಯೋಗ ಸಮಸ್ಯೆಗಳನ್ನು ನೀಗಿಸಿದರು. ಉಪ ಪ್ರಧಾನ ಮಂತ್ರಿಗಳಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ದೇಶಕ್ಕಾಗಿ ಅಪಾರವಾದ ಕೊಡುಗೆಯನ್ನು ನೀಡಿರುವ ಬಾಬು ಅವರು ನೆನಪುಗಳು ಭಾರತದಲ್ಲಿ ಅಜಾರಾಮರ ಎಂದರು.
ಜಗಜೀವನ್ ಅವರ ಪುತ್ರಿ ಮೀರಕುಮಾರಿ ಅವರು ಪಾರ್ಲಿಮೆಂಟ್‌ನಲ್ಲಿ ಸಭಾಪತಿಗಳಾಗಿ ಕಾರ್ಯನಿರ್ವಹಿಸಿದರು, ಬಾಬು ಅವರ ಜೀವನದ ಸಂದೇಶಗಳು ಪ್ರತಿಯೊಬ್ಬರು ಅಳವಡಿಸಿ ಕೊಳ್ಳುವ ಮೂಲಕ ಮುಂದಿನ ಪೀಳಿಗೆಗಳಿಗೆ ಅವರ ಸಂದೇಶಗಳು ತಿಳಿಯುವಂತೆ ಅರಿವು ಮೋಡಿಸ ಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯುಕೇಶ್ ಕುಮಾರ್ ಮಾತನಾಡಿ ಬಾಬು ಜಗಜೀವನ್ ರಾಮ್ ಅವರಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಡತನ, ಅಸ್ಪಶ್ಯತೆ, ಶೋಷಣೆಗಳನ್ನು ಅರಿತವರು ನೊಂದವರಿಗೆ ಸಮಾಜಿಕ ನ್ಯಾಯ ದೊರಕಿಸಲು ಸಂವಿಧಾನದ ಕರಡು ಸಮಿತಿಯ ಸದಸ್ಯರಾಗಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು ಎಂದರು,
ದಲಿತರ ಸಂಘಟನೆಗಳ ಮುಖಂಡರಾದ ವಿಜಯ ಕುಮಾರ್ ಮಾತನಾಡಿ ಬಾಬು ಜಗ ಜೀವನ್ ರಾಮ್ ಅವರ ಕೃಷಿ ವಿಜ್ಞಾನಿಯಾಗಿದ್ದು ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಿ ಅಧುನಿಕ ತಂತ್ರಜ್ಞಾನಗಳ ಮೂಲಕ ಕೃಷಿ ಸಮಾಜವನ್ನು ಸಂಘಟಿಸಿದರು, ಇದರ ಜೂತೆಗೆ ಒಡೆದ ಮನಸ್ಸುಗಳನ್ನು ಒಂದುಗೊಡಿಸಿ ಸಮಾಜವನ್ನು ಸಂಘಟಿಸುವಲ್ಲಿ ಯಶಸ್ವಿಗೆ ಇವರ ಪತ್ನಿ ಇಂದ್ರಾಣಿಯವರು ಸಂಪೂರ್ಣ ಸಹಕಾರ ನೀಡಿದರು, ನಿರುದ್ಯೋಗ ಸಮಸ್ಯೆಗಳನ್ನು ನೀಗಿಸಲು ಹಸಿರು ಕ್ರಾಂತಿಯ ಜೂತೆಗೆ ಕೈಗಾರಿಕೆಗಳಿಗೆ ಒತ್ತು ನೀಡಿ ನಿರುದ್ಯೋಗ ಸಮಸ್ಯೆಯನ್ನು ನೀಗಿದ ಉದ್ಯೋಗದ ಹರಿಕಾರ ಎಂದು ಶ್ಲಾಘಿಸಿದರು,