ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ತಿದ್ದುಪಡಿ ತರುವುದು ಕೇವಲ ಭ್ರಮೆ : ಶಾಸಕ ಲಕ್ಷ್ಮಣ ಸವದಿ

ಅಥಣಿ :ಜ.30: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳಾದ ಶಿಕ್ಷಣ ಸಂಘಟನೆ ಹೋರಾಟ ಎಂಬುದನ್ನು ನಾವು ಮೊದಲು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ತಂದೆ ತಾಯಿ ನೀಡಿದ ಸಂಸ್ಕಾರ ಹಾಗೂ ಶಿಕ್ಷಣದಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ಜಗತ್ತಿನ ಅಗ್ರಗಣ್ಯ ನಾಯಕರಾದರು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ಘಟಕದಿಂದ ಡಾ. ಅಂಬೇಡ್ಕರ ಮಹಾಪರಿನಿರ್ವಾಣ ದಿನದ ಅಂಗವಾಗಿ ಇತ್ತೀಚೆಗೆ ನಡೆಸಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಭಾರತೀಯ ಸಂವಿಧಾನದ ಬಗ್ಗೆ ಲಿಖಿತ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇಂದು ಪಟ್ಟಣದ ಆದರ್ಶ ನಗರದ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು
ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಬಸವಣ್ಣನವರ ಪ್ರೇರಣೆ ಆಗಿತ್ತು 12 ನೇ ಶತಮಾನದಲ್ಲಿ ಅಸ್ಪೃಶ್ಯತೆ ಅಸಮಾನತೆ ಸಹಬಾಳ್ವೆ ಈ ಜಗತ್ತಿನಲ್ಲಿ ಬರಬೇಕು ಎಂದು 12ನೇ ಶತಮಾನದಲ್ಲಿ ಹೋರಾಟವನ್ನು ಆರಂಭಿಸಿದರು ಬಸವಣ್ಣನವರ ಆಸೆಯಂತೆ ಈ ಸಂವಿಧಾನವನ್ನು ರಚನೆ ಮಾಡಿಕೊಂಡು ಸಮಾನತೆ ಇರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಅದರಲ್ಲಿರುವ ಕಾನೂನುಗಳಿಗೆ ನಾವು ಶಿರಸಾ ವಹಿಸಿ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಡಿಎಸ್ ಎಸ್ ಸಂಘಟನೆಯವರು ಮಕ್ಕಳ ಶಿಕ್ಷಣ, ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನ ಮುಂದೆಯೂ ಹಮ್ಮಿಕೊಳ್ಳಬೇಕು. ಇದಕ್ಕೆ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ಈ ವೇಳೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಸಮಾರಂಭ ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಪಾಠದ ಜೊತೆಗೆ ಸಂಸ್ಕಾರ ಕಲಿಸಬೇಕು.ಎಲ್ಲರೂ ಸಂವಿಧಾನ ಬಗ್ಗೆ ತಿಳಿದುಕೊಳ್ಳಬೇಕು, ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು.ಕರ್ನಾಟಕ ರಾಜ್ಯ ದಲಿತ ಸಂಘಟನೆ ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಂಡು ಒಳ್ಳೆ ಕೆಲಸ ಮಾಡುತ್ತಿದೆ ಅದಕ್ಕೆ ತುಂಬಾ ಸಂತೋಷವಾಗಿದೆ. ಇದರಿಂದ ನಿಮ್ಮ ಒಳ್ಳೆ ಕೆಲಸ ಮುಂದುವರಸಿ ಎಂದು ಸಂಘಟಕರಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಭಂತೇಜಿ ಧಮ್ಮದೀಪ ದಿವ್ಯ ಸಾನಿಧ್ಯ ವಹಿಸಿದ್ದರು.
ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ಜಿ.ಪಂ. ಮಾಜಿ ಸದಸ್ಯರಾದ ವಿನಾಯಕ ಬಾಗಡಿ, ಜಿಲ್ಲಾ ಸಂಚಾಲಕರ ಶ್ರೀಕಾಂತ ತಳವಾರ, ಎಮ್.ಎಮ್. ಖಾಂಡೇಕರ, ನ್ಯಾಯವಾದಿಗಳಾದ ಮಿತೇಶ ಪಟ್ಟಣ, ಎ.ಎಮ್. ಖೊಬ್ರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ, ಸಂಜಯ ತಳವಳಕರ, ರವಿ ಕಾಂಬಳೆ, ಕುಮಾರ ಬನಸೋಡೆ, ಶ್ರೀಕಾಂತ ಅಲಗೂರ, ಮಹಾಂತೇಶ ಬನಸೋಡೆ. ಸಚೀನ ಪೂಜಾರಿ, ನಿಜಾಮ ಮುಲ್ಲಾ, ಅಶೋಕ ಚೌಗಲಾ, ದೀಲಿಪ ಕಾಂಬಳೆ ಮಸರಗುಪ್ಪಿ, ಭೀರಪ್ಪ ಕಾಂಬಳೆ, ದತ್ತು ಕಾಂಬಳೆ, ಅಶೋಕ ನೀಡೋಣಿ, ಅನಿಲ ಕಾಂಬಳೆ, ಚಂದು ಬನಸೋಡೆ, ಪಾಂಡು ಕಾಂಬಳೆ, ಮಡಿವಾಳಪ್ಪ ವಡ್ಡರ, ಅಶೋಕ ಕಾಂಬಳೆ, ರೂಪಾ ಕಾಂಬಳೆ ಉಪಸ್ಥಿತರಿದ್ದರು. ಡಿಎಸ್‍ಎಸ್ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು


ಡಾ ಬಿ ಆರ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತಳಹದಿಯ ಮೇಲೆ ರಚಿತವಾದ ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಸಂವಿಧಾನ ತಿದ್ದುಪಡಿ ತರುವುದು ಕೇವಲ ಭ್ರಮೆ. ಯಾವುದೇ ಕಾಲಕ್ಕೂ ಭಾರತದ ಸಂವಿಧಾನಕ್ಕೆ ಕೈ ಹಚ್ಚುವಂತಹ ವ್ಯಕ್ತಿ ಭೂಮಿಯ ಮೇಲೆ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟುವುದು ಇಲ್ಲ ಇದು ಶತಸಿದ್ಧ ಯಾರೂ ಬಾಯಿ ಚಪಲಕ್ಕೆ ಆ ಮಾತನ್ನು ಹೇಳುತ್ತಾರೆ ಅದು ಸತ್ಯ ಸಂಗತಿಗೆ ಬಹಳ ದೂರದ ವಿಷಯ

              ಲಕ್ಷ್ಮಣ ಸವದಿ. ಶಾಸಕರು