ಭಾರತದ ಸಂವಿಧಾನ ಜಗತ್ತಿಗೆ ಮಾದರಿ

ಮುದ್ದೇಬಿಹಾಳ:ಎ.17: ಭಾರತದವು ಹಲವಾರು ಜಾತಿ, ಧರ್ಮಗಳನ್ನು ಒಳಗೋಂಡ ಬಹು ಸಂಸ್ಕøತಿಯುಳ್ಳ ದೇಶವಾಗಿದ್ದು ಸರ್ವ ಜನಾಂಗದವರು ಸಮನಾಗ ಬಾಳಲು ಭಾರತದ ಸಂವಿಧಾನದಿಂದ ಮಾತ್ರ ಸಾದ್ಯ ಎಂದು ತಾಲೂಕಿನ ಹಿರೇಮುರಾಳ ಗ್ರಾಮದ ಕಲಾಂ ಬ್ಯಾಂಕಿನ ಅಧ್ಯಕ್ಷ ಅಕ್ಬರಸಾಬ ಮುಲ್ಲಾ ಅಭಿಪ್ರಾಯಪಟ್ಟರು.
ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‍ರವರ 130ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಇಡಿ ಜಗತ್ತಿಗೆ ಮಾದರಿಯಾದ ಸಂವಿಧಾನವನ್ನು ರಚಿಸಿದ್ದಾರೆ ಸಂವಿಧಾನದಡಿ ನಾವು ಎಲ್ಲರು ನಡೆದರೆ ಭಾರತವು ಜಗತ್ತಿಗೆ ಮಾದರಿ ರಾಷ್ಟ್ರವಾಗಿ ಅಭಿವೃದ್ದಿ ಹೋಂದುವದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಅವರು ಹೇಳಿದರು.
ಈ ಸಮಯದಲ್ಲಿ ಬಾಬು ಮುಲ್ಲಾ, ಪೀರಸಾಬ ಮುಲ್ಲಾ, ಬಸಂತರಾಯ ನಾಗರತಿ, ಬೈಲಪ್ಪ ಚಲವಾದಿ, ಲೋಕೇಶ ಮುರಾಳ, ಯಮನೂರಿ ಚಲವಾದಿ, ಸಿದ್ದಣ್ಣ ಚಲವಾದಿ ಮತ್ತಿತರರು ಇದ್ದರು.