ಭಾರತದ ಸಂವಿಧಾನವೆ ಸರ್ವ ಶ್ರೇಷ್ಠ ಮಹಾಗ್ರಂಥಃ ನ್ಯಾಯವಾದಿ ದಾನೇಶ ಅವಟಿ

ವಿಜಯಪುರ, ನ.21:ಕಾಯಾರ್ಂಗ-ನ್ಯಾಯಾಂಗ-ಶಾಸಕಾಂಗ ದೇಶದ ಎಲ್ಲ ಆಗು-ಹೋಗು ಗಳನ್ನು ನಿಯಂತ್ರಿಸುವ ಬಾರತದ ಸಂವಿಧಾನವೇ ಸರ್ವ ಶ್ರೇಷ್ಠ ಮಹಾಗ್ರಂಥವೆಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.
ಮಹಾಲ- ಐನಾಪುರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನವಸಾನಿದ್ಯ ಸಂಸ್ಥೆಯವರು ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ. ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರರು ವಿರಚಿತ ಭಾರತದ ಸಂವಿಧಾನ. ಸಾರ್ವಭೌಮ.ಸಮಾಜವಾದಿ. ಜ್ಯಾತ್ಯಾತೀತ.ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕೆ ಎಲ್ಲ ಪ್ರಜಗಳಿಗೂ ರಾಜಕೀಯ. ಆರ್ಥಿಕ. ಸಾಮಾಜಿಕ ನ್ಯಾಯ ಒದಗಿಸಲು.ವ್ಯೆಕ್ತಿಗೌರವ.ಸಮಾನತೆ.ದೇಶದ ಏಕತೆ. ಸಮಗ್ರತೆ ಮತ್ತು ಬ್ರಾತತ್ವವನ್ನು ಮೂಡಿಸಲು ಪ್ರೇರೇಪಿಸುತ್ತಿದ್ದು. ಜಗತ್ತಿನಲ್ಲಿಯೇ ಬಹುದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.
ನವಸಾನಿದ್ಯ ಸಂಸ್ಥೆಯ ಮುಖ್ಯ ಸ್ಥರಾದ ಸಿಸ್ಟರ್ ಜ್ಯೋತಿ ಅವರು ಮಾತನಾಡಿ ಸರ್ವರಿಗೂ ಸಮ ಬಾಳು. ಸರ್ವರಿಗೂ ಸಮ ಪಾಲು ಎಂಬುದು ನಮ್ಮ ಭಾರತೀಯ ಸಂವಿಧಾನದ ಸದಾಶಯವಾಗಿದ್ದು ಭಾರತದ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನು ನಮ್ಮ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರೂಪಿಸಬೇಕೆಂದು ಸಂವಿಧಾನ ರಚನಾ ಸಮಿತಿಯ ಕನಸಾಗಿತ್ತು ಅದನ್ನು ಈಡೇರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಜಿ. ಎಂ.ಕನ್ನೂರ ಸಂವಿಧಾನದ ಗುರಿ ಮತ್ತು ಉದ್ದೇಶಗಳು ಹಾಗೂ ನಾಗರಿಕರಿಗೆ ದಯಪಾಲಿಸಿದ ಮೂಲಭೂತ ಹಕ್ಕುಮತ್ತು ಕರ್ತವ್ಯ ಹಾಗೂ ರಾಜ್ಯ ನಿರ್ದೇಶಕ ತತ್ವಗಳನ್ನು ವಿವರಿಸಿದರು.
ಶಿಕ್ಷಕಿಯರಾದ ಬಿ.ಎಚ್. ಸೂಳಿಕೇರಿ.ಎಸ್.ಎನ್.ಶಿಂಧೆ. ಎಂ.ಎನ್.ಚೌಧರಿ.ಎಸ್. ಆಯ.ಪಟ್ಟಣದ.ಜೇ.ಎಸ್. ಮೋಗಲಿ, ಪಿ.ಸಿ.ಕುಲಕರ್ಣಿ, ಎಸ್.ಎಂ.ಲಿಂಗದಳ್ಳಿ. ಶಿಕ್ಷಕರಾದ ಪಿ.ಜೇ. ಇನಾಮದಾರ, ಎಚ್.ಡಿ. ಪಾಂಡು, ಡಿ.ಏಮ್. ಜಾಬಗೊಂಡ, ಮಲ್ಲಿಕಾರ್ಜುನ ರೂಗಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು.
ನವಸಾನಿದ್ಯ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಕೈಲಾಸ್ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಸಮಾಜ ಕಾರ್ಯಕರ್ತೆ ಕವಿತಾ ನಿರೂಪಿಸಿದರು. ಶ್ರೀಮತಿ ಲಕ್ಷ್ಮೀ ವಂದಿಸಿದರು. ಮಕ್ಕಳಿಗೆ ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.