
ಅಥಣಿ :ಮಾ.11: ಆಧುನಿಕ ಭಾರತದ ಶೈಕ್ಷಣಿಕ ಕ್ರಾಂತಿಯ ಹರಿಕಾರರಾಗಿ ಇಡೀ ತಮ್ಮ ಸಂಪೂರ್ಣ ಜೀವನವನ್ನು ಮಹಿಳೆಯರ ಶಿಕ್ಷಣಕ್ಕಾಗಿ ಮುಡಿಪಾಗಿಟ್ಟ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನ ಎಲ್ಲರಿಗೂ ಆದರ್ಶವಾದದ್ದು ಎಂದು ಪತ್ರಕರ್ತ ಸಂತೋಷ ಬಡಕಂಬಿ ಅವರು ಹೇಳಿದರು.
ಅವರು ಸ್ಥಳೀಯ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ವೈ.ಜಿ.ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ 126 ಪುಣ್ಯಸ್ಮರಣೆ ನಿಮಿತ್ತ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿ ಹಿಂದಿನ ಕಾಲದಲ್ಲಿ ಭಾರತ ಮೂಢನಂಬಿಕೆ ಹಾಗೂ ಕಂದಾಚಾರಗಳಿಂದ ತುಂಬು ತುಳುಕುತ್ತಿದ್ದ ಸಂದರ್ಭದಲ್ಲಿ ದಮನೀತ ಮಹಿಳೆಯರ ಧ್ವನಿಯಾಗಿ, ಮೇಲ್ವರ್ಗದ ಜನರ ಕಂದಾಚಾರಗಳನ್ನು ದಿಕ್ಕರಿಸಿ ಮಹಿಳೆಯರಿಗೆ ಶಿಕ್ಷಣ ನೀಡಿ ಅವರನ್ನು ಮುನ್ನಲೆಗೆ ತಂದು “ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ” ಎಂದು ಬಿರುದು ಪಡೆದವರು ಮಾತೆ ಸಾವಿತ್ರಿಬಾಯಿ ಫುಲೆ ಎಂದು ಹೇಳಿದರು.
ಅನಂತರ ಪ್ರಾಚಾರ್ಯ ಡಾ ರಾಜು ವಂಟಗೂಡಿ ಅವರು ಮಾತನಾಡಿ ತಮ್ಮ ವೈಯಕ್ತಿಕವಾಗಿ ಬದುಕದೆ ಸಮಾಜ ಸೇವೆಗಾಗಿ ಬದುಕಿ ನಮಗೆಲ್ಲರಿಗೂ ಆದರ್ಶವಾದ ಫುಲೆ ದಂಪತಿಗಳ ತ್ಯಾಗ ಆದರ್ಶಪ್ರಾಯ, ಅವರಂತೆ ನಮಗೆ ಬದುಕಲು ಸಾಧ್ಯವಾಗದೇ ಇರಬಹುದು ಆದರೆ ಅವರ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ಈ ವೇಳೆ ಮಾಳಿ ಯುವ ಸಂಘಟನೆ ರಾಜ್ಯಾಧ್ಯಕ್ಷ ಮಹಾಂತೇಶ ಮಾಳಿ, ಅಥಣಿ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ, ಶಿಕ್ಷಕರಾದ ಸಿ ಎ ಗೋಠೆ, ಡಿ ಎಸ್ ಪಾಟೀಲ, ಎಮ್ ಎ ಮಠಪತಿ, ಎ ಎ ಚೌಗಲಾ, ಎಮ್ ಎ ರಡ್ಡೇರಹಟ್ಟಿ, ವಿನೋದ ಮಾನಗಾಂವಿ, ವಿಶ್ವನಾಥ ಕಾಗವಾಡೆ ಸೇರಿದಂತೆ ಇತರ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಗಿರೀಶ ಮಾಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.