ಭಾರತದ ವಿಶೇಷ ‌ವಿಮಾನ ರದ್ದುಗೊಳಿಸಿದ ಚೀನಾ

ಬೀಜಿಂಗ್‌, ನ.5- ಕೋರೋನೋ ಸೋಂಕು ಹಿನ್ನೆಲೆಯಲ್ಲಿ ಭಾರತದ ವಿಶೇಷ ವಿಮಾನ ಸೇವೆಯನ್ನು ಚೀನಾ ನಿರ್ಬಂದಿಸಿದೆ‌. ಚೀನಾದ ವಿವಿಧ ಕಡೆ ಇರುವ ಭಾರತೀಯರನ್ನು ಕರೆತರಲು ವಂದೇ ಭಾರತಂ ವಿಶೇಷ ವಿಮಾನ ಸೇವೆ ಆರಂಭಿಸಲಾಗಿತ್ತು.‌ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಚೀನಾ ವಿಶೇಷ ವಿಮಾನಿಗಳಿಗೆ ತಾತ್ಕಾಲಿಕ ತಡೆ ಹಾಕಿದೆ. ಕಳೆದ ವಾರ ಚೀನಾದಿಂದ ವಿಶೇಷ‌‌ ವಿಮಾನದಲ್ಲಿ ಬಂದ ಅನೇಕರಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದಿಂದ ಚೀನಾಕ್ಕೆ ಬರುವ ವಿಶೇಷ‌‌ ವಿ‌ಮಾನಗಳನ್ನು ರದ್ದು ಮಾಡಲಾಗಿದೆ.

ವಾಣಿಜ್ಯ ವಿಮಾನ ನಿರ್ಬಂಧ:

ವಾಣಿಜ್ಯ ವಿಮಾನಗಳ ಪ್ರಯಾಣಕ್ಕೆ‌ ನಿರ್ಬಂಧ. ಉಭಯ ದೇಶಗಳ ನಡುವೆ ಮುಂದುವರಿದಿದೆ. ಭಾರತ ಅಲ್ಲದೆ ಬ್ರಿಟನ್,ಬೆಲ್ಜಿಯಂ, ಫಿಲಿಪೈನ್‌,‌ ಅಮೇರಿಕಾ, ಪ್ರಾನ್ಸ್, ಜರ್ಮನಿ ಸೇರಿದಂತೆ ವಿವಿಧ ದೇಶಗಳಿಂದ ವಿಮಾನ ಬರುವುದನ್ನು ಚೀನಾ ನಿರ್ಬಂದಿಸಿದೆ.ಸೋಂಕು ಕಡಿಮೆ ಯಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 28 ರಿಂದ ಸೀಮಿತ ವಿಮಾನ ಸೇವೆಗೆ ಅವಕಾಶ ಮಾಡಿಕೊಡಲಾಗಿತ್ತು ಅದನ್ನು ಈಗ ಸ್ಥಗಿತಗೊಳಿಸಲಾಗಿದೆ. ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಚೀನಾ ಮಾರ್ಚ್ ಅಂತ್ಯದಿಂದ ವಿಮಾನ ಸಂಚಾರ ನಿರ್ಬಂದಿಸಿದೆ‌