
ಇಂಧೋರ್,ಮಾ.೩:ಸತತ ೨ ಸೋಲುಗಳಿಂದ ಕಂಗೆಟ್ಟಿದ್ದ ಪ್ರವಾಸಿ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಕ್ರಿಕೆಟ್ ಸರಣಿಯ ೩ನೇ ಪಂದ್ಯದಲ್ಲಿ ಪುಟಿದೆದ್ದು ೯ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನಿಂದಾಗಿ ಆಸ್ಟ್ರೇಲಿಯಾ, ೨-೧ ರಿಂದ ಅಂತರ ಕಾಯ್ದುಕೊಂಡಿದೆ.ಐಸಿಸಿ ವಿಶ್ವಕಪ್ ಟೆಸ್ಟ್ ಕ್ರಿಕೆಟ್‌ನಲ್ಲಿ ಫೈನಲ್ ತಲುಪುವ ಕನಸು ಕಾಣುತ್ತಿದ್ದ ಭಾರತಕ್ಕೆ ಈ ಸೋಲಿನಿಂದಾಗಿ ಹಿನ್ನಡೆಯಾಗಿದೆ.
ಸರಣಿ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಆಸ್ಟ್ರೇಲಿಯಾ ಸಿಲುಕಿತ್ತು. ಈಗ ಸರಣಿಯಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಕಾಂಗರೂಗಳು ಯಶಸ್ವಿಯಾಗಿದ್ದಾರೆ. ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದ್ದು, ಆಸ್ಟ್ರೇಲಿಯಾ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸರಣಿ ಸಮಬಲವಾಗಲಿದೆ.
೭೬ ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ, ಕೇವಲ ೧ ವಿಕೆಟ್ ಕಳೆದುಕೊಂಡು ಮೊದಲ ಅವಧಿಯಲ್ಲೇ ಗೆಲುವಿನ ನಗೆ ಬೀರಿತು. ಈ ಮೂಲಕ ಪಂದ್ಯ ಇನ್ನು ಎರಡೂವರೆ ದಿನಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾ ಗೆಲುವು
ಸಾಧಿಸಿದೆ.ಆಸ್ಟ್ರೇಲಿಯಾದ ಉಸ್ಮಾನ್‌ಕ್ವಾಜಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಪ್ರಾವಿಸ್‌ಹೆಡ್ ೪೯ ಹಾಗೂ ಮಾಮೂಸ್ ಲಘುಸ್‌ಚೇಂಜ್ ೨೮ ರನ್ ಗಳಿಸಿ ಅಜೇಯರಾಗುಳಿದರು. ಅಶ್ವಿನ್ ೧ ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಭಾರತ ಸೋತರೂ ೨-೧ ರಿಂದ ಮುನ್ನಡೆ ಕಾಯ್ದುಕೊಂಡಿದೆ. ಮಾ. ೯ ರಿಂದ ೧೩ರವರೆಗೆ ೪ನೇ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಈ ಪಂದ್ಯದಲ್ಲಿ ಭಾರತೀಯ ಸ್ಪಿನ್ ಬೌಲರ್‌ಗಳು ಮಿಂಚುವುದಕ್ಕಿಂತ ಹೆಚ್ಚಾಗಿ ಆಸ್ಟ್ರೇಲಿಯಾ ಸ್ಪಿನ್ನರ್‌ಗಳಾದ ನಾಥನ್‌ಲಿಯಾನ್ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಬಹುವಾಗಿ ಕಾಡಿದರು.
ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ೨ ಇನ್ನಿಂಗ್ಸ್‌ನಲ್ಲಿ ಉತ್ತಮ ಆಟ ಪ್ರದರ್ಶಿಸುವಲ್ಲಿ ಎಡವಿದ್ದರಿಂದ ೩ನೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸಬೇಕಾಯಿತು.
ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ ೧೦೯, ೨ನೇ ಇನ್ನಿಂಗ್ಸ್ ೧೬೩,
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ೧೯೭, ೨ನೇ ಇನ್ನಿಂಗ್ಸ್ ೧ ವಿಕೆಟ್ ನಷ್ಟಕ್ಕೆ ೭೮ ರನ್