ಭಾರತದ ವಿರುದ್ದ ಇಂಗ್ಲೆಂಡ್ ಗೆ ಆರು ವಿಕೆಟ್ ಜಯ: ರಾಹುಲ್ ಶತಕ ವ್ಯರ್ಥ

ಪುಣೆ, ಮಾ. 26- ಜಾನಿ ಬೈರ್ ಸ್ಟೋ ಭರ್ಜರಿ ಶತಕ‌ ಹಾಗೂ ಬೆನ್ ಸ್ಟೋಕ್ 99 ರನ್ ಗಳ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ದ ಇಂಗ್ಲೆಂಡ್ ಆರು ವಿಕೆಟ್ ಗಳಿಂದ ಜಯಗಳಿಸಿದೆ.
ಬೃಹತ್ ಮೊತ್ತದ ಸವಾಲಿನ ಬೆನ್ನಹತ್ತಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಯನ್ನು ದೂಳಿಪಟ ಮಾಡಿ ರನ್ ಹೊಳೆಯನ್ನೇ ಹರಿಸಿತು.
ಜೇಸನ್ ರಾಯ್ ಹಾಗೂ ಬೈರ್ ಸ್ಟೋ ಮೊದಲನೇ ವಿಕೆಟ್ ಗೆ 110 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿತು. ರಾಯ್ 55 ರನ್ ಗಳಿಸಿದರು.
ನಂತರ ಬೈರ್ ಸ್ಟೊ ಮತ್ತು ಬೆನ್ ಸ್ಟೋಕ್
ಭಾರತದ ಬೌಲಿಂಗ್ ದಾಳಿಯನ್ನು ಮನಬಂದಂತೆ ಥಳಿಸಿದರು. ಬೆನ್ ಸ್ಟೋಕ್ 52 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ ಕೇವಲ ಒಂದು ರನ್ ನಿಂದ ಶತಕ ವಂಚಿತರಾದರು.
ಬೈರ್ ಸ್ಟೋ 112 ಎಸೆತಗಳನ್ನು 11 ಬೌಂಡರಿ 7 ಸಿಕ್ಸರ್ ನೊಂದಿಗೆ 124 ರನ್ ಸಿಡಿಸಿದರು. ಜಾಸ್ ಬಟ್ಲರ್ ಶೂನ್ಯಕ್ಕೆ ನಿರ್ಗಮಿಸಿದರು.
ದಾವಿಡ್ ದಾವನ್ ಹಾಗೂ‌‌ ಲಿವಿಂಗ್ ಸ್ಟೋನ್ 43.3 ಓವರ್ ಗಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ದಾವನ್ 16 ಹಾಗೂ ಲಿವಿಂಗ್ ಸ್ಟೋನ್ 27 ರನ್ ಗಳಿಸಿ ಅಜೇಯ ರಾಗುಳಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಕೆ.ಎಲ್.ರಾಹುಲ್ ಭರ್ಜರಿ ಶತಕ , ರಿಷಬ್ ಪಂತ್ ಹಾಗೂ ನಾಯಕ ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ನಿಂದಾಗಿ ಭಾರತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 336 ರನ್ ಬೃಹತ್ ಮೊತ್ತ ಪೇರಿಸಿತು.
ಕೇವಲ 9 ರನ್ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ನಂತರ ಕೊಹ್ಲಿ ಹಾಗೂ ಶರ್ಮಾ ಇನ್ನಿಂಗ್ಸ್ ಕಟ್ಡಿದರು. ಆದರೆ ರೋಹಿತ್ ಶರ್ಮಾ 25 ರನ್ ಗಳಿಸಿ ನಿರ್ಗಮಿಸಿದರು.


ರಾಹುಲ್ 108, ರಿಷಬ್ ಪಂತ್ 70 ಹಾಗೂ ಕೊಹ್ಲಿ 66, ರನ್ ಗಳಿಸಿದ್ದು ವ್ಯರ್ಥವಾಯಿತು. ಹಾರ್ದಿಕ್ ಪಾಂಡ್ಯ 35 ರನ್ ಗಳಿಸಿದರು.
ಭಾರತ 336 ರನ್ ಗಳಿಸಿದ ಹೊರತಾಗಿಯೂ ಗೆಲುವು ಸಾಧಿಸಲು ಆಗಲಿಲ್ಲ‌ ಇಂದಿನ ಪಂದ್ಯದಲ್ಲಿ ಎರಡೂ ಕಡೆ ರನ್ ಹೊಳೆಯೇ ಹರಿದಿರುವುದು ವಿಶೇಷ.
ಈ ಗೆಲುವಿನೊಂದಿಗೆ ಇಂಗ್ಲೆಂಡ್ 1-1ರಿಂದ ಸರಣಿ ಸಮಬಲ ಸಾಧಿಸಿ ಸರಣಿ ಜೀವಂತವಾಗಿರಿಸಿ ಕೊಂಡಿದೆ.ಒಂದು ಪಂದ್ಯ ಮಾತ್ರ ಬಾಕಿ ಉಳಿದಿದ್ದು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ.