ಭಾರತದ ಭವಿಷ್ಯಕ್ಕಾಗಿ ಕೈಜೋಡಿಸಿದ ಕಾಲೇಜ್‌ದೇಖೋ

ಬೆಂಗಳೂರು.೩೦:ಮಾ೩೦: ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಉನ್ನತ ಶಿಕ್ಷಣ ಸೇವೆಗಳ ವ್ಯವಸ್ಥೆಯಾಗಿರುವ ಕಾಲೇಜ್‌ದೇಖೋ, ಕಾಲೇಜುಗಳು ಮತ್ತು ಡಿಗ್ರಿಗಳಿಗೆ ಸುಲಭ ಪ್ರವೇಶವನ್ನು ಒದಗಿಸುವುದು ಮತ್ತು ಮಾರ್ಗದರ್ಶನವನ್ನು ಒದಗಿಸುವ ಮೂಲಕ ಭಾರತದ ಯುವಕರಿಗೆ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸುತ್ತಿದ್ದು, ಸುಸ್ಥಿರ ಇಂಧನದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನವನ್ನು ಬೆಂಬಲಿಸುತ್ತಿದೆ.
ಉತ್ತಮ ಭವಿಷ್ಯವನ್ನು ರೂಪಿಸುವುದಕ್ಕೆ ಇತ್ತೀಚಿನ ಪ್ರಯತ್ನವಾಗಿ, ಸೌರ ಇಂಧನ ಮತ್ತು ಎಲೆಕ್ಟ್ರಿಕ್ ಸಂಚಾರ ಜಾಗೃತಿಯ ಅಭಿಯಾನವಾಗಿರುವ ದಿ ಸನ್‌ಪೆಡಲ್ ರೈಡ್‌ನ ಭಾಗವಾಗಿ ಭಾರತದಲ್ಲಿ ಎಲೆಕ್ಟ್ರಿಕ್ ಸೈಕಲ್ (ಸೋಲಾರ್ ಚಾಲಿತ) ಬಳಸಿ ಅತಿ ದೀರ್ಘ ಪ್ರಯಾಣ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ- ಸುಶೀಲ್ ರೆಡ್ಡಿಯವರನ್ನು ಬೆಂಬಲಿಸುತ್ತಿದೆ.
ಬೆಂಗಳೂರಿನ ಕೆಲವು ಪ್ರಮುಖ ಕಾಲೇಜುಗಳಾದ ಕ್ರೈಸ್ಟ್ ಯೂನಿವರ್ಸಿಟಿ, ಅಲಾಯನ್ಸ್ ಯುನಿವರ್ಸಿಟಿ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಐಐಎಂ-ಬಿಗೆ ಸುಶೀಲ್ ಭೇಟಿ ನೀಡಿದ್ದು, ಇ-ಮೊಬಿಲಿಟಿ ಪ್ರಾಮುಖ್ಯತೆ ಮತ್ತು ಸುಸ್ಥಿರ ಪರ್ಯಾಯವನ್ನು ಆಯ್ಕೆ ಮಾಡುವ ಕುರಿತು ಸೆಮಿನಾರ್‌ಗಳನ್ನು ಆಯೋಜಿಸಿದ್ದಾರೆ.
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಸ್ವೀಕರಿಸಿದ ಸುಶೀಲ್ ರೆಡ್ಡಿ ಮಾತನಾಡಿ “ಸನ್‌ಪೆಡಲ್ ರೈಡ್‌ನ ಇನ್ನೊಂದು ಮಹತ್ವದ ಪಯಣಕ್ಕೆ ನಾನು ಉತ್ಸುಕನಾಗಿದ್ದೇನೆ ಮತ್ತು ಸುಸ್ಥಿರ ಜೀವನ ಮತ್ತು ಸ್ವಚ್ಛ ಇಂಧನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಂದೇಶವನ್ನು ಪಸರಿಸಲಿದ್ದೇನೆ. ಹವಾಮಾನ ಬದಲಾವಣೆ ಒಂದು ಮಹತ್ವದ ಸಮಸ್ಯೆ ಮತ್ತು ಸಾಧ್ಯವಾದಷ್ಟೂ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಕಾಲೇಜ್‌ದೇಖೋ ರೀತಿ ಸಮಾನ ಮನಸ್ಕ ಪಾಲುದಾರರು ನಮಗೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.