ಭಾರತದ ಬೌಲಿಂಗ್ ದಾಳಿಗೆ ಕಿವೀಸ್ ದಿಟ್ಟ ಉತ್ತರ ವಿಕೆಟ್ ನಷ್ಟವಿಲ್ಲದೆ 129 ರನ್

ಕಾನ್ಪುರ, ನ‌.26-ಭಾರತದ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿರುವ ವಿಶ್ವ ಚಾಂಪಿಯನ್ ನ್ಯೂಜಿಲೆಂಡ್‌‌ ಮೊದಲ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ನ್ಯೂಜಿಲೆಂಡ್ ಪರ ಟಿಮ್ ಲಾಧಂ ಹಾಗೂ ವಿಲ್ ಯಂಗ್ ಇನ್ನಿಂಗ್ಸ್ ಆರಂಭಿಸಿ ತಂಡಕ್ಕೆ ಉತ್ತಮ ಮುನ್ನಡೆ ಒದಗಿಸಿದ್ದಾರೆ.
ಎರಡನೇ ದಿನದಾಟದ ಅಂತ್ಯಕ್ಕೆ ಲಾಧಂ 50 ಹಾಗೂ ಯಂಗ್ 75 ರನ್ ಗಳಿಸಿ ಆಡುತ್ತಿದ್ದಾರೆ. ನ್ಯೂಜಿಲೆಂಡ್ 216 ರನ್ ಹಿನ್ನಡೆ ಅನುಭವಿಸಿದೆ.
ಇದಕ್ಕೂ ಮುನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಭರ್ಜರಿ ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 345 ರನ್ ಗಳಿ ಗೆ ಸರ್ವಪತನ ಕಂಡಿತು.
171 ಎಸೆತಗಳನ್ನು‌ ಎದುರಿಸಿದ ಅಯ್ಯರ್ ಎರಡು ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 105
ರನ್ ಗಳಿಸಿ ಸೌಧಿ ಬೌಲಿಂಗ್ ನಲ್ಲಿ ವಿಕೆಟನಲ್ಲಿ ನಿರ್ಗಮಸಿದರು.
ಅಜೇಯ್ ಜಡೇಜಾ 50 ರನ್ ಗಳಿಸಿ ಸೌಧಿ ಬೌಲಿಂಗನಲ್ಲಿ ಔಟಾದರು. ಅಶ್ವಿನ್ ಉಪಯುಕ್ತ 38 ರನ್ ಗಳಿಸಿದರು. ಉಮೇಶ್ 10 ರನ್‌ಗಳಿಸಿ ಅಜೇಯರಾಗುಳಿದರು.
ಕಿವೀಸ್ ಪರ ಸೌಧಿ 5, ಜಾಮಿಸನ್ 3 ಹಾಗೂ ಅಜಾಜ್ ಪಟೇಲ್ ಎರಡು ವಿಕೆಟ್ ಪಡೆದರು.