ಭಾರತದ ಬೌಲಿಂಗ್ ದಾಳಿಗೆ ಕಿವೀಸ್ ತತ್ತರ 62 ರನ್ ಗೆ ಅ‌ಲೌಟ್, ಕೊಹ್ಲಿ ಪಡೆಯ ಬಿಗಿ ಹಿಡಿತ

ಮುಂಬೈ, ಡಿ.4- ಆರ್.ಅಶ್ವಿನ್ ಹಾಗೂ ಮೊಹ್ಮದ್ ಸಿರಾಜ್ ಬೌಲಿಂಗ್ ದಾಳಿಗೆ‌ ದೂಳೀಪಟವಾಗಿರುವ ನ್ಯೂಜೆಲೆಂಡ್ ಮೊದಲ‌ ಇನ್ನಿಂಗ್ಸ್ ನಲ್ಲಿ ಕೇವಲ 62 ರನ್ ಗಳ ಅಲ್ಪಮೊತ್ತಕ್ಕೆ ಕುಸಿದಿದೆ.
ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 263 ರನ್ ಗಳ ಬೃಹತ್ ಮುನ್ನಡೆ ಗಳಿಸಿ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ನ್ಯೂಜಿಲೆಂಡ್ ಗೆ ಫಾಲೊ ಆನ್ ಹೇರುವ ಅವಕಾಶವಿದ್ದರೂ ಎರಡನೇ ಇನ್ನಿಂಗ್ಸ್ ಕೊಹ್ಲಿ ನಿರ್ಧರಿಸಿದರು.
ಕಿವೀಸ್ ಪರ ಲಾಥಮ್ 10 ಹಾಗೂ ಕೈಲ್ ಜಾಮಿಸನ್ 17 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ, ಉಳಿದ ಬ್ಯಾಟರ್ ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.
ಭಾರತದ ಪರ ಅಶ್ವಿನ್ ಕೇವಲ 8 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.ಮೊಹ್ಮದ್ ಸಿರಾಜ್ ಹಾಗೂ ಮೂರು ಹಾಗೂ ಜಯಂತ್ ಯಾದವ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್ ಗಳಿಗೆ ಸರ್ವಪತನ ಕಂಡಿತು. ಮಯಾಂಕ್ ಅಗರ್ ವಾಲ್ 150 ರನ್ ಬಾರಿಸಿದರು. ಅಕ್ಷರ್ ಪಟೇಲ್ 52 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಕೀರ್ತಿಗೆ ಪಾತ್ರರಾದರು.
ನ್ಯೂಜಿಲೆಂಡ್ ಪರ ಎಜಾಜ್ ಪಟೇಲ್ 119 ರನ್ ನೀಡಿ ಇನ್ನಿಂಗ್ಸ್ ನಲ್ಲಿ 10 ವಿಕಟ್ ಪಡೆದು ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ದಾಖಲೆ ಯನ್ನು ಸರಿಗಟ್ಟಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ, ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಇದರೊಂದಿಗೆ ಒಟ್ಟು 332 ರನ್ ಗಳ ಭಾರೀ ಮುನ್ನಡೆ ಸಾಧಿಸಿದೆ.
ದಿನದಾಟದ ಅಂತ್ಯಕ್ಕೆ ಮಯಾಂಕ್ 38 ಹಾಗೂ ಚೇತೇಶ್ವರ ಪೂಜಾರ 29 ರನ್ ಗಳಿಸಿ ಆಡುತ್ತಿದ್ದಾರೆ. ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿತ್ತು.