ಭಾರತದ ಬೌಲಿಂಗ್ ದಾಳಿಗೆ ಆಸೀಸ್ ತತ್ತರ:ಕೊಹ್ಲಿ ಪಡೆಗೆ 62 ರನ್ ಮುನ್ನಡೆ

ಅಡಿಲೇಡ್, ಡಿ 18-, ಭಾರತದ ಬೌಲಿಂಗ್ ದಾಳಿ ತತ್ತರಿಸಿರುವ ಕಾಂಗರೂಗಳು ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್ವಗಳಿಗೆ ಸರ್ವಪತನ‌ ಕಂಡಿದೆ. ಇದರೊಂದಿಗೆ‌ ಕೊಹ್ಲಿ ಪಡೆ 62 ರನ್ ಗಳ ಮುನ್ನಡೆ ಸಾಧಿಸಿದೆ.
ಎರಡನೆ ಇನ್ನಿಂಗ್ಸ್ ಆರಂಭಿಸಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ.
ಓವಲ್ ಅಡಿಲೇಡ್ ಮೈದಾನದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ಸಾಧರಣ ಮೊತ್ತದ ಹೊರತಾಗಿಯೂ ಭಾರತ ಬಿಗಿ ಹಿಡಿತ ಸಾಧಿಸುವಲ್ಲಿ ಸಫಲವಾಗಿದೆ. ಭಾರತದ 244 ರನ್ ಗಳ ಉತ್ತರವಾಗಿ ಕಾಂಗರೂಗಳನ್ನು 191 ರನ್ ಗಳಿಗೆ ಕಟ್ಟಿಹಾಕಿದೆ.
ನಾಯಕ ಟಿಮ್ ಪೈನ್ ಅಜೇಯ 73 ಹಾಗೂ ಲಾಬು ಶ್ಟಾಘ್ನೆ 47 ರನ್ ಬಾರಿಸಿದ್ದನ್ನು ಹೊರತುಪಡಿಸಿದರೆ ಉಳಿದ‌ ಆಟಗಾರರು ಟೀಂ ಇಂಡಿಯಾ ಬೌಲಿಂಗ್ ದಾಳಿ ಎದುರಿಸಲು ವಿಫಲವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಭಾರತದ ಪರ ಆರ್ ಆಶ್ವಿನ್ 4 , ಉಮೇಶ್ ಯಾದವ್ 3 ಹಾಗೂ ಬುಮ್ರಾ 2 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 9 ರನ್ ಗಳಿಸಿದೆ.
ಭರವಸೆಯ ಆಟಗಾರ ಪೃಥ್ವಿ ಶಾ ಕೇವಲ ನಾಲ್ಕು ರನ್ ಗಳಿಸಿ ಎರಡನೇ ಇನ್ನಿಂಗ್ಸ್‌ನಲ್ಲೂ ಉತ್ತಮ‌ ಆಟ ಪ್ರದರ್ಶಿಸಲು ವಿಫಲರಾದರು. 5 ರನ್ ಗಳಿಸಿರುವ ಮಯಾಂಕ್ ಹಾಗೂ ಬುಮ್ರಾ ಆಡುತ್ತಿದ್ದಾರೆ.