ವಾಷಿಂಗ್ಟನ್,ಜೂ,೬- ಭಾರತದ ಪ್ರಜಾಪ್ರಭುತ್ವ ರೋಮಾಂಚನಕಾರಿ ಪ್ರಜಾಪ್ರಭುತ್ವವಾಗಿದೆ. ಬೇಕಿದ್ದರೆ ನೀವೇ ಹೋಗಿ ನೋಡಿ ಎಂದು ಅಮೇರಿಕಾದ ಶ್ವೇತಭವನ ಹೇಳಿದೆ.
ಭಾರತದಲ್ಲಿ ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಳವಳವನ್ನು ತಳ್ಳಿಹಾಕಿದ್ದು , ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆರೋಗ್ಯಕರವಾಗಿದೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ
ಈ ತಿಂಗಳ ೨೨ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾಕ್ಕೆ ಭೇಟಿ ನೀಡಲಿದ್ದು ಈ ವೇಳೆ ಹಲವು ವಿಷಯಗಳು ಚರ್ಚೆಗೆ ಬರಲಿದೆ ಎಂದು ತಿಳಿಸಿದ್ದಾರೆ
ಭಾರತ , ಅಮೇರಿಕಾದ ಅತ್ಯುತ್ತಮ ಸ್ನೇಹಿ ರಾಷ್ಟ್ರಗಳಲ್ಲಿ ಒಂದಾಗಿದೆ.ಪ್ರಪಂಚದಾದ್ಯಂತ ಯಾರೊಂದಿಗಾದರೂ ನಾವು ಹೊಂದಿರಬಹುದಾದ ಕಳವಳಗಳನ್ನು ವ್ಯಕ್ತಪಡಿಸಲುಎಂದಿಗೂ ಹಿಂಜರಿಯುವುದಿಲ್ಲ. ಆದರೆ ಆರೀತಿಯ ವಾತಾವರಣ ಭಾರತದಲ್ಲಿ ಇಲ್ಲ ಎಂದು ತಿಳಿಸಿದ್ಧಾರೆ.
ರಕ್ಷಣಾ ಕಾರ್ಯದರ್ಶಿ, ಲಾಯ್ಡ್ ಆಸ್ಟಿನ್ ಅವರು ಕೆಲವು ಹೆಚ್ಚುವರಿ ರಕ್ಷಣಾ ಸಹಕಾರ ಘೋಷಿಸಿರುವುದನ್ನು ನೋಡಿದ್ದೀರಿ, ಅದನ್ನು ಭಾರತದೊಂದಿಗೆ ಮುಂದುವರಿಸಲಿದ್ದೇವೆ. ಸಹಜವಾಗಿ, ಎರಡು ದೇಶಗಳ ನಡುವೆ ಸುದೀರ್ಘ ಆರ್ಥಿಕ ವ್ಯಾಪಾರವಿದೆ ಎಂದು ಅವರು ಹೇಳಿದ್ದಾರೆ.