
ಲಂಡನ್, ಮಾ. ೮- ಭಾರತದ ಪರಿಸ್ಥಿತಿ “ಸಂಪೂರ್ಣ ದರಿದ್ರವಾಗಿದೆ ತಂದೆ ಆರ್‌ಎಸ್‌ಎಸ್‌ನವರಾಗಿದ್ದರೂ ದೇಶವನ್ನು ಗುರುತಿಸುವುದಿಲ್ಲ ಎನ್ನುವ ಲಂಡನ್‌ನಲ್ಲಿರುವ ಭಾರತೀಯ ಮೂಲದ ಇಇಓ ಮಾಲಿನಿ ಮೆಹ್ರಾ ಹೇಳಿಕೆ ವಿವಾದ ಕಿಡಿ ಹೊತ್ತಿಸಿದ್ದು ವೈರಲ್ ಆಗಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲಂಡನ್ ಚಾಥಮ್ ಹೌಸ್‌ನಲ್ಲಿ ನಡೆದ ಸಂವಾದಲ್ಲಿ ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಿದ ಸಾಕಷ್ಟು ಪ್ರಶಂಸೆ ಮತ್ತು ವಿರೋಧಕ್ಕೂ ಕಾರಣವಾಗಿದೆ.
“ನನ್ನ ದೇಶದ ಸ್ಥಿತಿಯ ಬಗ್ಗೆ ನನಗೆ ದುಃಖವಾಗುತ್ತಿದೆ. ನನ್ನ ತಂದೆ ಆರ್‌ಎಸ್‌ಎಸ್‌ನವರು, ಆದರೆ ಅವರು ದೇಶವನ್ನು ಗುರುತಿಸುವುದಿಲ್ಲ, ಅವರ ಆತ್ಮವನ್ನು ಆಶೀರ್ವದಿಸುವುದಿಲ್ಲ. ಪ್ರಜಾಪ್ರಭುತ್ವವನ್ನು ಪುನಃ ಸಬಲೀಕರಣಗೊಳಿಸಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.
ತಾವು ಹುಟ್ಟಿ ಬೆಳೆದ ದೇಶವನ್ನು ಗುರುತಿಸದ ಲಕ್ಷಾಂತರ ಜನರಲ್ಲಿ ತಾನೂ ಒಬ್ಬಳು ಎಂದು ಹೇಳಿದರು.
ಆಗ ಮಧ್ಯ ಪ್ರವೇಶಿಸಿದ ರಾಹುಲ್ ಗಾಂಧಿ ನಿಮ್ಮ ನಿರ್ಧಾರ ಒಳ್ಳೆಯದೇ ಅಥವಾ ಕೆಟ್ಟದ್ದೇ. “ನಿಮಗೆ ಏನನ್ನಿಸುತ್ತಿದೆ ಎಂದಾಗ ಆಕೆ. ಇವತ್ತು ನಾನೇ ಇಲ್ಲಿದ್ದೇನೆ ನನಗೆ ದರಿದ್ರವಾಗುತ್ತಿದೆ ಪ್ರತಿಕ್ರಿಯಿಸಿದ್ದಾರೆ
“ನಿಮ್ಮ ತಂದೆ ಆರ್‌ಎಸ್‌ಎಸ್‌ನಲ್ಲಿದ್ದಾರೆ ಮತ್ತು ಅವರು ದೇಶ ಗುರುತಿಸುವುದಿಲ್ಲ ಎಂದು ನೀವು ಹೇಳಿದಾಗ ಇದು ನಿಜಕ್ಕೂ ವಿಷಾದದ ಸಂಗತಿ. ಇದು ಪರಿಣಾಮ ಬೀರಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರತಿಯೊಬ್ಬರ ಕರ್ತವ್ಯ
“ಭಾರತದ ಮೂಲ ಮೌಲ್ಯಗಳಿಗಾಗಿ ಮಾತನಾಡುವುದು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರಪಂಚದ ಎಲ್ಲೆಡೆ ಇರುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ
ವೀಡಿಯೊ ವೈರಲ್ ಆಗುತ್ತಿದ್ದಂತೆ, ಇನ್ ಪೋಸಿಸ್ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು, ಮಾಲಿನಿ ಮೆಹ್ರಾ ಅವರನ್ನು ‘ಆರ್ಥಿಕ ನಿರಾಶ್ರಿತರು’ ಎಂದು ಕರೆದಿದ್ದು ನಿಂದನೆಗಳನ್ನು ನಿಲ್ಲಿಸಿ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಾಲಿನಿ ಮೆಹ್ರಾ ಅವರ ತಂದೆ ಡಾ. ಮಾಧವ್ ಮೆಹ್ರಾ ಅವರು ಐಎಎಸ್ ಅಧಿಕಾರಿಯಾಗಿದ್ದರು ಆದರೆ ಆರ್‌ಎಸ್‌ಎಸ್‌ನೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ.