ಭಾರತದ ಪರಂಪರೆ ವಿಶ್ವಕ್ಕೆ ಮಾದರಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.5: ಮಾನವನ ಮೂಲ ಸಂಸ್ಕøತಿಯಾಗಿ ಬೆಳೆದು ಬಂದಿರುವ ಜಾನಪದ ಪರಂಪರೆ ನಮ್ಮ ದೇಶದಲ್ಲಿ ಗಟ್ಟಿಯಾಗಿ ಬೆಳೆದು ನಿಂತಿದೆ. ಭಾರತದ ಜಾನಪದ ಪರಂಪರೆಯು ಸಾರ್ವತ್ರಿಕ ಮೌಲ್ಯಗಳನ್ನು ಹೊಂದಿದೆ. ಹೀಗಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿ ಬೆಳೆದು ವಿಶ್ವಗುರು ಎನಿಸುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್ ಪಾಟೀಲ (ಯತ್ನಾಳ) ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಭಾ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ವಿಜಯಪುರ ಹಾಗೂ ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ (ರಿ) ವತಿಯಿಂದ ಏರ್ಪಡಿಸಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ನಮ್ಮ ಜಿಲ್ಲೆಯಲ್ಲಿ ಕನ್ನಡ ಜಾನಪದ ಪರಿಷತ್ ಬಾಳನಗೌಡ ಪಾಟೀಲ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಜನಪದ ಕಲೆಯ ರಕ್ಷಣೆ ಮತ್ತು ಕಲಾವಿದರ ಸೇವೆ ಚೆನ್ನಾಗಿ ನಡೆದಿದು ಗಮನಿಸಿದ್ದೇನೆ.ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ಕ ಜಾ ಪ ಕಾರ್ಯ ಚಟುವಟಿಕೆ ತಿಳಿಸಿದರು.
ಈ ಸಂದರ್ಭದಲ್ಲಿ ಕ ಜಾ ಪ ವಿಜಯಪುರ ತಾಲೂಕಾಧ್ಯಕ್ಷ ವೈ ಎಚ್ ಪವಾರ,ಇಂಡಿ ತಾಲೂಕಾಧ್ಯಕ್ಷ ರಾಜಶೇಖರ ಪಾಟೀಲ, ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಸುಖದೇವಿ ಆಲಬಾಳಮಠ, ಶ್ರೀಮತಿ ಆರಿಫಾ ಮಿರ್ಜಾ, ಶಿವಾಜಿ ಮೋರೆ, ಕ ಜಾ ಪ ವಲಯ ಅಧ್ಯಕ್ಷರುಗಳಾದ ಸಿದ್ಧರಾಮ ಬಿರಾದಾರ (ಮನಗೂಳಿ) ಶರಣು ಅವಟಿ (ಕನಮಡಿ) ಸಿದರಾಯ ಬಡಿಗೇರ (ನಾಗಠಾಣ) ಸಾಹಿತಿಗಳಾದ ಶಂಕರ ಬೈಚಬಾಳ,ಮೋಹನ ಕಟ್ಟಿಮನಿ, ಡೈಟ್ ನಿವೃತ್ತ ಉಪನ್ಯಾಸಕಿ ಶ್ರೀಮತಿ ಎಂ ಎ ಆಲಮೇಲ ಮತ್ತಿತರರು ಉಪಸ್ಥಿತರಿದ್ದರು.