ಭಾರತದ ಪರಂಪರೆಗೆ ಶರಣನಾಡು ಬೀದರ ಜಿಲ್ಲೆಯ ಕೊಡುಗೆ ಅಪಾರ : ಡಾ. ಇಂದುಮತಿ ಪಾಟೀಲ

ಬೀದರ:ನ.25:ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಬಸವಕಲ್ಯಾಣ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೀದರ ಇತಿಹಾಸ ವಿಭಾಗ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜನವಾಡಾ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪರಂಪರೆ ಸಪ್ತಾಹ 2021 ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಜರುಗಿತು. ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕಲಬುರಗಿಯ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಇಂದುಮತಿ ಪಾಟೀಲ ಅವರು ಮಾತನಾಡಿ “ಮೌನವಾದ ಇತಿಹಾಸಕ್ಕೆ ಭಾವನೆಗಳ ಮೂಲಕ, ಸಂಸ್ಕøತಿಯ ಮೂಲಕ. À ಭಾರತೀಯ ಇತಿಹಾಸ ಶಾಸ್ತ್ರಕ್ಕೆ ಜೀವಂತಿಕೆ ಇದೇ ಎನ್ನುವುದೇ ಪರಂಪರೆ ಸಪ್ತಾಹದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ ವಿಜಯದಶಮಿ ಕಾರ್ಯಕ್ರಮ ಇಂದಿಗೂ ಹಂಪಿ ಉತ್ಸವದ ಮೂಲಕ ಆಚರಣೆ ಮಾಡುತ್ತಾರೆ. ಇದು ನಮ್ಮ ಕರ್ನಾಟಕದ ಸಂಸ್ಕøತಿಯ ಪರಂಪರೆ. ಅನುಭವ ಮಂಟಪ ಉತ್ಸವ, ಬೀದರ ಉತ್ಸವ ಇವು ನಮ್ಮ ಪರಂಪರೆ. ನಮ್ಮ ಸಂಸ್ಕøತಿಯನ್ನು ಜೀವಂತ ಇಡುವ ಕಾರ್ಯಕ್ರಮಗಳು ಇವುಗಳಾಗಿವೆ ಎಂದು ತಿಳಿಸಿದರು.

ಒಂದು ಕಾಲದಲ್ಲಿ ಮಹಿಳೆ ಓದುವುದು ಕ್ಲಿಷ್ಟಕರವಾಗಿತ್ತು. ಅಂತಹ ಸನ್ನಿವೇಶದಲ್ಲೂ ಓದಿ, ಗುರುವಿನ ಮಾರ್ಗದರ್ಶನದಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಡಾ. ಇಂದುಮತಿ ಪಾಟೀಲ ತಿಳಿಸಿದರು.

ಸುಲೇಪೇಟ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಸವರಾಜ ಬಾಗಾ ಅವರು ಮಾತನಾಡಿ ಭಾರತದ ಸ್ಮಾರಕಗಳ ಸಂರಕ್ಷಣೆಯಲ್ಲಿ ಯುವಕರ ಪಾತ್ರದ ಕುರಿತು ವಿವರಿಸಿದರು. ಪ್ರತಿಯೊಂದು ಗ್ರಾಮಗಳಲ್ಲಿಯೂ ಸ್ಮಾರಕಗಳಿವೆ. ಅವುಗಳನ್ನು ಸಂಗ್ರಹಿಸಿ ಅದರ ಇತಿಹಾಸ ಸಂಶೋಧನೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜಪ್ಪ ಬಬಚೇಡಿಯವರು ಮಾತನಾಡಿ “ಪಾಶ್ಚಿಮಾತ್ಯ ಸಂಸ್ಕøತಿಯನ್ನು ಅಳವಡಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ ನಮ್ಮ ಸಂಸ್ಕøತಿಯನ್ನು ಮರೆಯಬೇಡಿ ಎಂದು ಖಂಡಿತ ಹೇಳುತ್ತೇನೆ. ಕರ್ನಾಟಕದಲ್ಲಿ ಬೇಲೂರು, ಹಳೇಬೀಡು, ಹಂಪಿ, ಇನ್ನಿತರ ಶಿಲ್ಪಕಲೆಗಳ ಸಂಸ್ಕøತಿ ನೋಡುತ್ತೇವೆ. ಇದು ನಮ್ಮ ಶ್ರೀಮಂತ ಸಂಸ್ಕøತಿಯಾಗಿದೆ. ವಿದ್ಯೆ ಕಲಿತ ವ್ಯಕ್ತಿ ಭ್ರಷ್ಟನಾಗಬಹುದು. ಆದರೆ ಸಂಸ್ಕøತಿ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗಲಾರ ಎಂದು ಮಹಾತ್ಮರ ನುಡಿಗಳನ್ನು ಸ್ಮರಿಸಿದರು. ನಮ್ಮದು ಶ್ರೇಷ್ಠವಾದ ಸಂಸ್ಕøತಿ. ಅದನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಭಾಗ್ಯವತಿಯವರು ಮಾತನಾಡಿ “ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ ಬಸವಕಲ್ಯಾಣ ಪರಂಪರೆ ಇಲಾಖೆಯ ಕ್ಯೂರೇಟರ್ ಅವರನ್ನು ಸ್ಮರಿಸಿದರು. ಹಾಗೂ ಭಾರತದ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯವನ್ನು, ಪರಂಪರಾ ಘಟಕದ ಮೂಲಕ, ತಮ್ಮ ಸೇವಾವಧಿಯುದ್ದಕ್ಕೂ ಮುಂದುವರೆಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಧನರಾಜ ತುಡಮೆ, ಪ್ರೊ. ಮನೋಜಕುಮಾರ, ಶ್ರೀಮತಿ ಪಾರ್ವತಿ ಮೇತ್ರೆ, ಡಾ. ಭೀಮಶಾ, ಮುನ್ನೆಮ್ಮ, ಸೇರಿದಂತೆ ಅನೇಕರು ಉಪಸ್ತಿತರಿದ್ದರು.