ಭಾರತದ ನೂತನ ರಾಷ್ಟ್ರಪತಿಯಾಗಿ ದ್ರೌಪಧಿ ಮುರ್ಮು ಆಯ್ಕೆ ಸಿಹಿ ಹಂಚಿ ವಿಜಯೋತ್ಸವ

ಬೀದರ,ಜು.22: ಸ್ವತಂತ್ರ ಭಾರತದ ಆದಿವಾಸಿಗಳ ಪಾಲಿನ ಐತಿಹಾಸಿಕ ದಿನ ಆದಿವಾಸಿ ಸಮುದಾಯಕ್ಕೆ ಸೇರಿರುವ “ಶ್ರೀಮತಿ ದ್ರೌಪದಿ ಮುರ್ಮು” ರವರು ಮೊದಲ ಆದಿವಾಸಿ ಮಹಿಳೆ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದು ಅಖಿಲ ಭಾರತೀಯ ಗೊಂಡ ಆದಿವಾಸಿ ಸಂಘದಿಂದ ಹಾಗೂ ಬೀದರ ಜಿಲ್ಲಾ ಗೊಂಡ ನೌಕರರ ಸಂಘದ ವತಿಯಿಂದ ಬೀದರಿನ ಮಹಾತ್ಮ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಗಿದೆ.

ಈ ಆಯ್ಕೆ ಯಾಗಲೂ ಕಾರಣರಾಗಿರುವ ದೇಶದ ಎಲ್ಲ ಜನಪ್ರತಿನಿಧಿಗಳಿಗೂ ಹಾರ್ದಿಕ ಅಭಿನಂದನೆಗಳು. ಅಖಿಲ ಭಾರತೀಯ ಗೊಂಡ ಆದಿವಾಸಿ ಸಂಘ (ರಿ) ನವದೆಹಲಿ ರಾಜ್ಯ ಘಟಕ ಕರ್ನಾಟಕ -ಮಾಳಪ್ಪ ಅಡಸಾರೆ (ಪ್ರಧಾನಕಾರ್ಯದರ್ಶಿಗಳು) -ಎಮ್.ಎಸ್.ಕಟಗಿ (ಕೋಶದ್ಯಕ್ಷರು) -ವಿಜಯಕುಮಾರ ಡುಮ್ಮೆ (ಸಹಕೋಶದ್ಯಕ್ಷರು ಹಾಗೂ ಸಂಸ್ಥಾಪಕ ಅದ್ಯಕ್ಷರು ಆದಿವಾಸಿ ಸಾಹಿತ್ಯ ಪರಿಷತ್ತು ಬೀದರ),ಬಾಬುರಾವ ಮಲ್ಕಾಪೂರ, ಪೀರಪ್ಪಾ ಯರನಳ್ಳಿ, ಸಂಗು ಚಿದ್ರಿ, ಪುಂಡಲೀಕರಾವ ಇಟ್ಕಂಪಳ್ಳಿ, ರಘುನಾಥ ಭೂರೆ, ಗೊಂಡ ಬಾಬುರಾವ, ಮಹಾಲಿಂಗ ಶೀಲವಂತ , ರಘುನಾಥ ರಾಯಗೊಂಡ, ಸಾಹಿತಿ ಸಂಜೀವಕುಮಾರ ಅತಿವಾಳೆ, ಬಾಲಾಜಿ ಶೇರಿಕಾರ, ಗೊಂಡ ನೌಕರರ ಸಂಘದ ಅಧ್ಯಕ್ಷ ಶಿವರಾಜ ಬಿರಾದಾರ, ದೀಪಕ ಚಿದ್ರಿ,ಮಾರುತಿ ಬಳತ ,ದತ್ತು ಕಾಡವಾದ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.