ಭಾರತದ ಒಕ್ಕೂಟ ವ್ಯವಸ್ಥೆಗೆ ಪಟೇಲರ ಕೊಡುಗೆ ಅಪಾರ

ವಾಡಿ: ಸೆ.21:ಇಂದಿನ ಅಖಂಡ ಭಾರತದ ನಿರ್ಮಾಣಕ್ಕೆ ಸರ್ದರ್ ವಲ್ಲಭಭಾಯ ಪಟೇಲರು ಚಾಣಕ್ಷತನದಿಂದ ಕೈಗೋಂಡ ದಿಟ್ಟ ನಿರ್ಧಾವೆ ಕಾರಣವಾಗಿದೆ, ಭಾರತದ ಒಕ್ಕೂಟ ವ್ಯವಸ್ಥೆಗೆ ಅವರ ಕೋಡುಗೆ ಅವಿಸ್ಮರಣಿಯವಾಗಿದೆ ಎಂದು ಶಿಕ್ಷಕ ಅಪ್ಪರಾವ ಬಿಲಗುಂದಿ ಹೇಳಿದರು

ಪಟ್ಟಣದ ಡಾ. ಬಾಬಾಸಾಹೇಬ ಅಂಬೇಡ್ಕರ ಪ್ರೌಢ ಶಾಲೆಯಲ್ಲಿ ಶನಿವಾರ ಜರುಗಿದ 75ನೇ ಕಲ್ಯಾಣ ಕರ್ನಾಟಕ ಅಮೃತಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

1947 ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ಅನೇಕ ಪ್ರಾಂತ್ಯಗಳು ಭಾರತ ಒಕ್ಕುಟ ವ್ಯವಸ್ಥೆಗೆ ಸೇರಿಕೋಂಡವು ಆದರೆ ಹೈದರಾಬಾದ್ ನಿಜಾಮನು ತನ್ನ ಪ್ರಾಂತ್ಯವನ್ನು ಭಾರತದೊಂದಿಗೆ ಸೇರಲು ನಿರಾಕರಿಸಿ ತಾನು ಸ್ವಾತಂತ್ರ್ಯ ರಾಜ್ಯವಾಗಿ ಉಳಿಯಲು ಬಯಸಿದನು

ಅಂದಿನ ಗೃಹಮಂತ್ರಿಯಾಗಿದ್ದ ಸರ್ದರ್? ವಲ್ಲಭಭಾಯ್ ಪಟೇಲರು ನಿಜಾಮನ ವಿರುದ್ಧ ಪೆÇಲೀಸ್ ಕಾರ್ಯಾಚರಣೆ ಕೈಗೊಂಡರು. ಈ ವೇಳೆ ನಿಜಾಮ ಸೈನ್ಯ ಭಾರತಕ್ಕೆ ಶರಣಾಯಿತು. ಹೈದರಾಬಾದ್ ಪ್ರಾಂತ್ಯ ಸೆ.17ರಂದು ಭಾರತಕ್ಕೆ ವಿಲೀನವಾಯಿತು. ಈ ದಿನವು ಇತಿಹಾಸದಲ್ಲಿ ಒಂದು ಪ್ರಮುಖ ದಿನವಾಗಿ ಗುರುತಿಸಿಕೊಂಡಿದೆ

ಅಮೃತ ಜ್ಞಾನ ಶಿಕಣ ಸಂಸ್ಥೆಯ ಅಧ್ಯಕ್ಷರಾದ ಟೋಪಣ್ಣ ಕೋಮಟೆ ಧ್ವಜಾರೋಹಣ ನೇರವೆರಿಸಿದರು, ಸಂಸ್ಥೆಯ ಕಾರ್ಯದರ್ಶಿ ಅಮೃತ ಕೋಮಟೆ, ಶಿಕ್ಷಕರಾದ ಸುನಿಲ ಹಳಿಪೇಟ, ಬಸವರಾಜ ಗೂಳೆ, ಅರುಣಕುಮಾರ ಹುಗ್ಗೆ, ಲಕ್ಷ್ಮೀಕಾಂತ ಕೋಬಾಳ, ದಸರಥ ಗಾಯಕವಾಡ, ಶಿಕ್ಷಕಿಯರಾದ ಸುವರ್ಣ, ರೇಖಾ, ಅನಿತಾಬಾಯಿ ನಾಟೇಕರ,ಶಾಂತಕುಮಾರಿ ಬರ್ಮಾ, ಇದ್ದರು.