ಭಾರತದ ಆರ್ಥಿಕ ಬೆಳವಣಿಗೆಗೆ ಸುಧಾರಣಾ ಕ್ರಮ

ನ್ಯೂಯಾರ್ಕ್,ಜೂ.೨೧- ಭಾರತದಲ್ಲಿ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ತಮ್ಮ ನೇತೃತ್ವದ ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಇಂದಿಲ್ಲಿ ಹೇಳಿದ್ದಾರೆ.
ಅನೇಕ ಅನುಸರಣೆ ಕ್ರಮ ಕೈಗೊಳ್ಳುವ ಮೂಲಕ ಕಾನೂನು ನಿಬಂಧನೆ ಸರಳೀಕರಣಗೊಳಿಸಲಾಗಿದೆ. ಈ ಮೂಲಕ ಆರ್ಥಿಕತೆ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಸುಧಾರಣಾ ಕ್ರಮ ಕೈಗೊಂಡಿರುವುದು ಪೂರಕವಾಗಿದೆ ಎಂದಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಹೂಡಿಕೆದಾರರು, ಲೇಖಕರು ಮತ್ತು ಹೆಡ್ಜ್ ಫಂಡ್ ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್‌ನ ಸಹ-ಸಂಸ್ಥಾಪಕ ರೇ ಡಾಲಿಯೊ ಅವರೊಂದಿಗೆ ಸಭೆ ನಡೆಸಿದ ಪ್ರಧಾನಿ ಈ ವಿಷಯ ತಿಳಿಸಿದ್ದಾರೆ.
ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್‌ನ ಸಹ-ಸಂಸ್ಥಾಪಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ತೆಗೆದುಕೊಂಡ ಸುಧಾರಣಾ ಕ್ರಮಗಳನ್ನು ಎತ್ತಿ ತೋರಿಸಿದ್ದಾರೆ.
ಅರ್ಥವ್ಯವಸ್ಥೆಯಲ್ಲಿ ಭಾರತ ಹೇಗೆ ಸರಿಯಾಗಿ ಮಾಡಬೇಕೆಂದು ಜಗತ್ತಿಗೆ ತೋರಿಸಬಲ್ಲದು ಎಂದು ತಿಳಿಸಿದ್ದಾರೆ.
ಮಾದರಿ ಶ್ಲಾಘನೆ
ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕದ ಅರ್ಥಶಾಸ್ತ್ರಜ್ಞ ಪಾಲ್ ರೋಮರ್ ಅವರು ಆಧಾರ್ ಆಧಾರಿತ ದೃಢೀಕರಣದ ಭಾರತದ ಮಾದರಿಯನ್ನು ಶ್ಲಾಘಿಸಿದರು.
ಪ್ರಧಾನಿ ಮೋದಿ ಮತ್ತು ವಿಶ್ವಬ್ಯಾಂಕ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞರು ತಮ್ಮ ಸಭೆಯಲ್ಲಿ ಆಧಾರ್ ಅಳವಡಿಕೆ ಮತ್ತು ಡಿಜಿಲಾಕರ್‌ನಂತಹ ಅತ್ಯಾಧುನಿಕ ಪರಿಹಾರಗಳನ್ನು ಒಳಗೊಂಡಂತೆ ಭಾರತದ ಡಿಜಿಟಲ್ ಮಾರ್ಗವನ್ನು ಚರ್ಚಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯ ಪ್ರಕಾರ, ನಗರಾಭಿವೃದ್ಧಿಗಾಗಿ ಭಾರತ ಕೈಗೊಂಡಿರುವ ವಿವಿಧ ಉಪಕ್ರಮಗಳ ಕುರಿತು ಅವರು ಚರ್ಚಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಅಮೆರಿಕದ ಖ್ಯಾತ ಶಿಕ್ಷಣ ತಜ್ಞರ ಗುಂಪಿನೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ಕೃಷಿ, ಮಾರುಕಟ್ಟೆ, ಇಂಜಿನಿಯರಿಂಗ್, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳಿಂದ ಬಂದ ಅಮೆರಿಕದ ಖ್ಯಾತ ಶಿಕ್ಷಣ ತಜ್ಞರ ಗುಂಪಿನೊಂದಿಗೆ ಸಂವಾದ ನಡೆಸಿದರು.
ಟ್ವಿಟರ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, “ಭಾರತ-ಅಮೆರಿಕ ಜ್ಞಾನ ಪಾಲುದಾರಿಕೆಗೆ ಶಕ್ತಿ ತುಂಬುವುದು. ಕೃಷಿ, ಮಾರುಕಟ್ಟೆ, ಎಂಜಿನಿಯರಿಂಗ್, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಪ್ರಸಿದ್ಧ ಅಮೇರಿಕಾ ಶಿಕ್ಷಣ ತಜ್ಞರ ಗುಂಪಿನೊಂದಿಗೆ ಸಂವಾದ ನಡೆಸಿದ್ದಾರೆ ಎಂದಿದ್ದಾರೆ.