ಭಾರತದ ಆರ್ಥಿಕತೆಯು ನೀರಿಕ್ಷೆಗೂ ಮೀರಿ ಚೇತರಿಕೆ : ಅಷ್ಠಗಿ

ಕಲಬುರಗಿ:ನ.15:ಭಾರತದ ಆರ್ಥಿಕತೆಯು ನಿರೀಕ್ಷೆಗೂ ಮೀರಿ ಅತಿ ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಜಾಗತಿಕ ಸಂಸ್ಥೆಯಾದ ಆಕ್ಸಫರ್ಡ ಇಕನಾಮಿಕ್ಸ್ ಅಭಿಪ್ರಾಯಪಟ್ಟಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಎಕನಾಮಿಕ್ಸ್ ಸ್ನಾತಕೋತ್ತರ ಪದವಿಧರರೂ ಆದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಸರಾಸರಿ ಶೇಕಡ 6ಕ್ಕಿಂತ ಹೆಚ್ಚಾಗಲಿದೆ ಎಂದು ಆಕ್ಸಫರ್ಡ ಎಕನಾಮಿಕ್ಸ್ ವಿಶ್ಲೇಷಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ 7.27 ಹಣದುಬ್ಬರವಿತ್ತು.ಇದೇ ವೇಳೆ ವಿವಿಧ ರೀತಿಯ ಚಟುವಟಿಕೆಗಳಿಗೆ ಚಾಲನೆ ದೊರೆತಿರುವುದರಿಂದ ಮತ್ತು ಇವುಗಳಿಂದ ದೊರೆತ ಆರ್ಥಿಕ ಪರಿಸ್ಥಿತಿಯ ಮಾಹಿತಿಯನ್ನು ವಿಶ್ಲೇಷಿಸಿದಾಗ ಆರ್ಥಿಕತೆಯು ನೀರಿಕ್ಷೆಗೂ ಮೀರಿ ಚೇತರಿಸಿಕೊಳ್ಳುತ್ತಿದೆ ಎಂದು ಆಕ್ಸಫರ್ಡ ಎಕನಾಮಿಕ್ಸ್ ತಿಳಿಸಿರುವುದು ಸ್ವಾಗತಾರ್ಹವಾಗಿದೆ.
ಹಣದುಬ್ಬರವು ಅಕ್ಟೋಬರ್ ತಿಂಗಳಲ್ಲಿ ಕೋವಿಡ ಪೂರ್ವದಲ್ಲಿ ಇದ್ದ ಸ್ಥಿತಿಗೆ ಬಂದಿರುವುದು ಆರ್ಥಿಕ ಪ್ರಗತಿಯನ್ನು ಬಿಂಬಿಸುತ್ತದೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಹೀತದೃಷ್ಟಿಯಿಂದ ಸುದೀರ್ಘ ಅವಧಿಗೆ ಹೇರಿದ್ದ ಲಾಕ್ ಡೌನ್ ನಂತರ ತೆಗೆದುಕೊಂಡ ನಿರ್ಣಯಗಳು ವಿಶ್ವದ ಇತರ ರಾಷ್ಟ್ರಗಳಿಗಿಂತಲೂ ನಮ್ಮ ದೇಶದ ಆರ್ಥಿಕತೆಯು ಪುನಶ್ಚೇತನದ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಮೋದಿಯವರ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಅಂಬಾರಾಯ ಅಷ್ಠಗಿ ಅಭಿಪ್ರಾಯಪಟ್ಟಿದ್ದಾರೆ.