ಕೋಲಾರ,ಅ,೩:ಮಹಾತ್ಮ ಗಾಂಧಿಜೀ ಭಾರತಮಾತೆಯ ವರಪುತ್ರ.ಭಾರತಕ್ಕೆ ಅಹಿಂಸಾ ಮಾರ್ಗದಲ್ಲಿ ಸತ್ಯಗ್ರಹ ಪ್ರತಿಭಟನೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ದರ್ಶನಿಕ. ಸತ್ಯ ಮೇವಾ ಜಯತೇ ಎಂಬ ಘೋಷಣೆಯನ್ನು ಪಾಲನೆ ಮಾಡುವ ಮೂಲಕ ಪ್ರಮಾಣಿಕತೆಯನ್ನು ಮೆರೆದ ಮಹಾತ್ಮ ಗಾಂಧಿಜೀಯವರು ಭಾರತಕ್ಕೆ ಆದರ್ಶ ಪುರುಷರು ಎಂದು ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಅಭಿಪ್ರಾಯ ಪಟ್ಟರು
ನಗರದ ಜಿಲ್ಲಾ ಕಾಂಗ್ರೇಸ್ ಭವನದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿಜೀ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಭಾವ ಚಿತ್ರಗಳಿಗೆ ಪುಷ್ಟ ನಮನ ಸಲ್ಲಿಸಿ ಅವರು ಮಾತನಾಡಿದರು.
ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ ಮಹಾತ್ಮ ಗಾಂಧಿಜೀ ಮತ್ತು ಲಾಲ್ ಬಹೂದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಗಾಂಧಿಜೀ ಮತ್ತು ಶಾಸ್ತ್ರಿಜೀ ಇಬ್ಬರು ಭಾರತದ ದರ್ಶನಿಕರು, ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸೆ,ಶಾಂತಿಯ ಸಂದೇಶದೊಂದಿಗೆ ಸತ್ಯ ಮೇವಾ ಜಯತೆಯನ್ನು ಸಾಧಿಸಿದ ಸಿದ್ದಿ ಪುರುಷರು ಎಂದರು,
ಹಿರಿಯ ಕಾಂಗ್ರೇಸ್ ಮುಖಂಡರಾದ ವಕೀಲ ವೆಂಕಟೇರಾಮೇಗೌಡರು ಮಾತನಾಡಿ ಭಾರತವನ್ನು ಧೀರ್ಘ ಕಾಲ ಆಡಳಿತ ನಡೆಸಿದ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ ಎಂದರು,
ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷ ಕೆ.ಜಯದೇವ ಮಾತನಾಡಿ ರಾಷ್ಟ್ರದ ಪಿತಮಹಾ ಮಹಾತ್ಮಗಾಂಧಿಜೀ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀಜಿಯವರ ಹುಟ್ಟುಹಬ್ಬವನ್ನು ರಾಜ್ಯದ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಗಾಂಧಿಜೀ ಮತ್ತು ಶಾಸ್ತ್ರಿಜೀಯವರ ಜಯಂತಿ ನೆನಪಿನಾರ್ಥವಾಗಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅನ್ನ ದಾಸೋಹ ಭಾಗ್ಯಕ್ಕೆ ೫೦ ಲಕ್ಷ ರೂ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು,
ಮಾಜಿ ಸಚಿವ ಕೆ.ಎ.ನಿಸ್ಸಾರ್ ಆಹಮ್ಮದ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ವೆಂಕಟಪತಪ್ಪ, ತ್ಯಾಗರಾಜ್, ನಾಗರಾಜ್, ಮುನಿಯಪ್ಪ, ರಾಮಯ್ಯ, ಶಿವಕುಮಾರ್, ನವೀನ್.ಮುಂತಾದವರು ಹಾಜರಿದ್ದರು,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿದರು, ನಂತರ ನಗರದ ಗಾಂದಿವನದಲ್ಲಿ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು,