ಭಾರತದ ಆಕ್ರೋಶಕ್ಕೆ ಮಣಿದ ಬ್ರಿಟನ್ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ

ಲಂಡನ್, ಸೆ.22- ಭಾರತದ ಆಕ್ರೋಶಕ್ಕೆ ಮಣಿದ ಬ್ರಿಟನ್ ಕೋವಿಶೀಲ್ಡ್ ಲಸಿಕೆಗೆ ಬ್ರಿಟನ್ ಮಾನ್ಯತೆ ನೀಡಿದೆ.

ತಾರತಮ್ಯ ಧೋರಣೆಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ನಂತರ ಬ್ರಿಟನ್ ಸರ್ಕಾರ ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ.

ಬ್ರಿಟನ್ ಸರ್ಕಾರ ಇಂದು ಪರಿಷ್ಕೃತ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದವರು ಬ್ರಿಟನ್ ಪ್ರವೇಶಿಸಿದ ಬಳಿಕ ಕಡ್ಡಾಯವಾಗಿ 10 ದಿನ ಕ್ವಾರಂಟೈನ್ ಗೆ ಒಳಗಾಗಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಮೊದಲು ಬ್ರಿಟನ್ ಸರ್ಕಾರ ಭಾರತೀಯ ಎರಡು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕೆಂಬ ನಿಯಮವನ್ನು ಜಾರಿಗೊಳಿಸಿತ್ತು. ಭಾರತ ಸರ್ಕಾರದ ಆಕ್ಷೇಪದ ನಂತರ ಬ್ರಿಟನ್ ನಿಯಮವನ್ನು ಸಡಿಲಗೊಳಿಸಿತ್ತು.

ಅಸ್ಟ್ರಾಜೆನೆಕಾ ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವಾಕ್ಸೇವ್ರಿಯಾ, ಮೊಡೆರ್ನಾ ಟಕೆಡಾ ಲಸಿಕೆಗಳನ್ನು ಅನುಮೋದಿತ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬ್ರಿಟನ್‌ನ ಸಾರಿಗೆ, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸಚಿವಾಲಯಗಳು ಪ್ರಕಟಣೆಯಲ್ಲಿ ತಿಳಿಸಿವೆ.