ಭಾರತದಿಂದ ಅಕ್ಕಿ ಆಮದಿಗೆ ವಿಯೆಟ್ನಾಂ ನಿರ್ಧಾರ

ಮುಂಬೈ,ಹನೋಯ್, ಜ. ೫- ವಿಶ್ವದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಅಕ್ಕಿಯನ್ನು ರಫ್ತುಮಾಡುವ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿರುವ ವಿಯೆಟ್ನಾಂ ಇದೇ ಮೊದಲ ಬಾರಿಗೆ ತನ್ನ ವಿರೋಧಿ ಯಾದ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಹಲವು ದಶಕಗಳ ನಂತರ ಇದೇ ಮೊದಲ ಬಾರಿಗೆ ವಿಯೆಟ್ನಾಮ್ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ದರ ವಿಪರೀತ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಹಾಗೂ ಸ್ಥಳೀಯವಾಗಿ ಪೂರೈಕೆ ಕಡಿಮೆಯಾಗಿರುವ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಅಕ್ಕಿಯು ಉದ್ಯಮದ ನಾಲ್ವರು ಅಧಿಕಾರಿಗಳು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಏಷಿಯಾದಲ್ಲಿ ಪೂರೈಕೆ ವಿಚಾರದಲ್ಲಿ ತೀವ್ರ ಸಮಸ್ಯೆ ಉಂಟಾಗಿರುವ ಬೆನ್ನಲ್ಲೇ ವಿಯೆಟ್ನಾಂ ಅಕ್ಕಿ ಖರೀದಿಗೆ ಮುಂದಾಗಿದೆ.
೨೦೨೧ರಲ್ಲಿ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಈ ರಾಷ್ಟ್ರ ಮುಂದಾಗಿದೆ. ಥಾಯ್ಲ್ಯಾಂಡ್ ಹಾಗೂ ವಿಯೆಟ್ನಾಂ ದೇಶಗಳು ಭಾರತದಿಂದ ಅಕ್ಕಿ ಖರೀದಿಸಲು ತೀರ್ಮಾನಿಸಿವೆ. ಏಳು ದೇಶಗಳಲ್ಲಿನ ಸಾಂಪ್ರದಾಯಿಕ ಖರೀದಿದಾರರು ಭಾರತದ ಮಾರುಕಟ್ಟೆಯತ್ತ ನೋಡುವಂತಾಗಿದೆ.
ಭಾರತದಿಂದ ೭೦ ಸಾವಿರಕ್ಕೂ ಹೆಚ್ಚು ಟ ನ್ ಅಕ್ಕಿ ಖರೀದಿಸಲು ಮುಂದಾಗಿರುವ ಎರಡು ದೇಶಗಳು ಭಾರತದ ವರ್ತಕರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜನವರಿ ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ಪ್ರತಿ ಟನ್ ಗೆ ೩೧೦ ಡಾಲರ್ ದರದಂತೆ ಅಕ್ಕಿ ಖರೀದಿಸಲು ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ.
ಇದೇ ಮೊದಲ ಬಾರಿಗೆ ನಾವು ವಿಯೆಟ್ನಾಂಗೆ ಅಕ್ಕಿ ರಫ್ತು ಮಾಡಲು ಮುಂದಾಗಿದ್ದೇವೆ ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿವಿ ಕೃಷ್ಣರಾವ್ ತಿಳಿಸಿದ್ದಾರೆ. ಭಾರತದಲ್ಲಿ ಅಕ್ಕಿ ದರಗಳು ಅತ್ಯಂತ ಆಕರ್ಷಕ ವಾಗಿವೆ ಇದೇ ಕಾರಣಕ್ಕಾಗಿ ಮಾಡಲು ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.