ಭಾರತದಲ್ಲಿ ಹಸಿರು ಕ್ರಾಂತಿ ಸಂಚಲನ ಮೂಡಿಸಿದ ಮಹಾನ ನಾಯಕ ಬಾಬು ಜಗಜೀವನ ರಾಮ್ : ಬಡಿಗೇರ

ಜೇವರ್ಗಿ :ಏ.12: ದೇಶದಲ್ಲಿ ಬರಗಾಲ ಬಿದ್ದಾಗ ಇಂಧಿರಾಗಾಂಧಿ ಅವರ ಸಚಿವ ಸಂಪುಟದಲ್ಲಿ ಕೃಷಿ ಸಚಿವರು ಆಗಿ ಅಧಿಕಾರ ವಹಿಸಿಕೊಂಡು ದೇವರಲ್ಲಿ ಒಂದು ಪ್ರಾರ್ಥನೆ ಮಾಡಿದ ಕೆಲವೇ ಗಂಟೆಗಳಲ್ಲಿ ವರಣ ಧರಗೆ ಇಳಿದು ಭೂಮಿ ತಂಪು ಮಾಡಿ ಹಸಿರಾಗಿ ಮಾಡಿತು ಇದರಿಂದ ನಾವು ರೈತರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಾಬು ಜಗಜೀವನರಾಮ್ ಪಣ ತೊಟ್ಟು ಹಸಿರು ಕ್ರಾಂತಿ ಸೃಷ್ಟಿಸಿದ ಮಾಹಾನ ನಾಯಕ ಎಂದು ಜೇವರ್ಗಿಯಲ್ಲಿ ಹಮ್ಮಿಕೊಳ್ಳಲಾದ ಬಾಬು ಜಗಜೀವನರಾಮ ಅವರ 117ನೇ ಜಯತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಧರ್ಮಣ್ಣ ಬಡಿಗೇರ ಅವರು ಮಾತನಾಡಿದರು

ಬಾಬು ಜಗಜೀವನರಾಮ ಅವರು ಕಾರ್ಮಿಕ ಸಚಿವರು ರಕ್ಷಣ ಸಚಿವರು ಆಹಾರ ಸಚಿವರು ಆಗಿ ಪಡಿತರ ಆಹಾರ ವ್ಯವಸ್ಥೆ ಮಾಡಿದ ಕೀರ್ತಿ ಇವರಿಗೆ ಸಲ್ಲಿಸುತ್ತದೆ ಮತ್ತು ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿ ಕೃಷಿಯನ್ನು ಮೇಲೇತ್ತರಕ್ಕೆ ಎತ್ತಿದ ಕೀರ್ತಿ ಸಲ್ಲುತ್ತದೆ

ಅದಕ್ಕೆ ನಾವು ಅವರ ಸಂದೇಶ ಪಾಲಿಸಬೇಕು ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಮತ್ತು ರಾಜಕೀಯವಾಗಿ ಆರ್ಥಿಕವಾಗಿ ಬೆಳಿಯಬೇಕು ಅಂದಾಗ ಮಾತ್ರ ನಮ್ಮ ಸಮಾಜ ಬೆಳೆಯಲು ಸಾಧ್ಯ ಎಂದರು

ಈ ಸಂದರ್ಭದಲ್ಲಿ ಜಯಂತಿ ಸಮಿತಿ ಸಮಿತಿ ಅಧ್ಯಕ್ಷ ಯಲ್ಲಪ್ಪ. ಕುಂಟುನೂರ ಸಂಜಯಸಿಂಗ್ .ಶಾಮ್ ನಾಟೇಕರ್ ಬಸಣ್ಣ ಸರಕಾರ, ಮಾನಪ್ಪ ಗೋಗಿ,ಸುಭಾಷ್ ಕಾಂಬ್ಳೆಪರಶುರಾಮ್ ಜಮಖಂಡಿನಾಗರಾಜ್ ಆಲಗೂರುಶಿವಶರಣಪ್ಪ ಆಂದೋಲಮಲ್ಲಿಕಾರ್ಜುನ್ ಬಿಲಾರ ಸಿದ್ದರಾಮಕಟ್ಟಿ ಭೀಮರಾಯ ಆಲಳಕರ್ ಭೀಮು ಕ್ಯಾದಪುರ ಶಂಕರಲಿಂಗ ಕರಕಳ್ಳಿ, ಅಮೀನಪ್ಪ ಹೊಸಮನಿ, ರಾಜು ಮುಕ್ಕಣ್ಣ, ರಾಜಶೇಖರ್ ಸಿರಿ, ಸಂಜಯ ಸಿಂಗ್,ಯಲ್ಲಪ್ಪ. ಯಡ್ರಾಮಿ, ಸುಭಾಸ್ ಡೊಳ್ಳೆ, ಶೇಕಪ್ಪ. ಬಿ ಅನಿಲಕುಮಾರ ದೊಡಮನಿ, ದೇವಿಂದ್ರ. ದೊಡಮನಿ, ಪರಶುರಾಮ,ಮಾದಿಗ ಶರಣು ಆದಿಮನಿಅಶೋಕ್ ನೆಲೋಗಿ .ರಾಜಕುಮಾರ್ ಬಳ್ಳಂಡಗಿ .ಮರಿಯಪ್ಪ ಗುಡೂರ ಹಣಮಂತ ಶಾಬದಿಕರ್ .ಗಂಗಾಧರ್ ವಚನಳ್ಳಿ ಪರಶುರಾಮ್ ಮುದುವಾಳ ರಾಮು ಬಿಲಾರ ಹನುಮಂತ ನಾಟೇಕರ ಮುಖಂಡರು ಇದ್ದರು.