ಭಾರತದಲ್ಲಿ ಸೂರ್ಯಗ್ರಹಣ ಗೋಚರವಿಲ್ಲ

ಬೆಂಗಳೂರು, ಏ.೨೦- ವರ್ಷದ ಮೊದಲ ಸೂರ್ಯಗ್ರಹಣವೂ ಇಂದು ಸಂಭವಿಸುತ್ತಿದ್ದು, ಭಾರತ ಹೊರತು ಪಡಿಸಿ ಇತರೆ ದೇಶಗಳಲ್ಲಿ ಗೋಚರವಾಗುತ್ತದೆ. ದಕ್ಷಿಣ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಗ್ರಹಣದ ಸಂಪೂರ್ಣತೆಯು ಪಶ್ಚಿಮ ಸ್ಟ್ರೇಲಿಯಾದ ಎಕ್ಸ್‌ಮೌತ್‌ನಲ್ಲಿ ಗೋಚರಿಸುತ್ತದೆ.ಗುರುವಾರದ ಸೂರ್ಯಗ್ರಹಣವು ಹೈಬ್ರಿಡ್ ಆಗಿದ್ದು, ಇದು ಭಾಗಶಃ ಸೂರ್ಯಗ್ರಹಣ ಅಥವಾ ಸಂಪೂರ್ಣ ರ್ಯಗ್ರಹಣವಾಗಿರುವುದಿಲ್ಲ. ಬದಲಾಗಿ ಇದು ಎರಡರ ಮಿಶ್ರಣವಾಗಿರುತ್ತದೆ.
ಪ್ರಪಂಚದ ಒಂದು ಭಾಗದಲ್ಲಿ ಅಥವಾ ಇನ್ನೊಂದು ಭಾಗದಲ್ಲಿ ೧೮ ತಿಂಗಳಿಗೊಮ್ಮೆ ಈ ಸೂರ್ಯಗ್ರಹಣ ಸಂಭವಿಸುತ್ತದೆ.೨೦೨೩ ರ ಮೊದಲ ಹೈಬ್ರಿಡ್ ಸೂರ್ಯಗ್ರಹಣ ಬೆಳಿಗ್ಗೆ ೦೭:೦೪ ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ ೧೨:೨೯ ಕ್ಕೆ ಕೊನೆಗೊಳ್ಳುತ್ತದೆ.ಗ್ರಹಣವು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆಯಲಿದೆ. ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದಾಗ ಸಂಪೂರ್ಣತೆಯು ಒಂದು ನಿಮಿಷಕ್ಕಿಂತ ಕಡಿಮೆ ಇರುತ್ತದೆ. ಹೈಬ್ರಿಡ್ ಗ್ರಹಣವು ಗುರುವಾರ ಆಸ್ಟ್ರೇಲಿಯಾದ ಹಲವಾರು ಭಾಗಗಳಲ್ಲಿ ಗೋಚರಿಸುತ್ತದೆ.