ಭಾರತದಲ್ಲಿ ಪೋಲಿಯೋ ಬೇರುಸಮೇತ ನಾಶ

ವಿಜಯಪುರ.ಮಾ. ೫: ಭಾರತ ದೇಶದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಯಾವುದೇ ಪೋಲಿಯೋ ಪ್ರಕರಣ ಕಾಣದಿದ್ದು ಈಗಾಗಲೇ ಭಾರತ ದೇಶ ಪೋಲಿಯೋ ನಿರ್ಮೂಲನೆ ಗೊಂಡಿದೆ(ಯೆರಾಡಿಕೇಶನ್ ) ಎಂದು ಸರ್ಕಾರ ಘೋಷಿಸಿದ್ದು, ಮುಂದಿನ ಹಂತ ಸಂಪೂರ್ಣ ಪೋಲಿಯೋ ಮುಕ್ತ(ಟರ್ಮಿನೇಷನ್) ಎಂದು ಘೋಷಿಸಬೇಕಾಗಿದೆ ಎಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಶ್ರೀಧರ್ ತಿಳಿಸಿದರು.
ಅವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪೋಲಿಯೋ ಹನಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೋಟರಿ ಸಂಸ್ಥೆಯ ಪಲ್ಸ್ ಪೋಲಿಯೋ ಚೇರ್ ಪರ್ಸನ್ ಬಸವರಾಜುರವರು ಮಾತನಾಡಿ ೨೦೧೧ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೊನೆ ಪ್ರಕರಣ ಕಂಡುಬಂದಿದ್ದು, ಮುಂದಿನ ಸಾಲಿನಲ್ಲಿ ಪಲ್ಸ್ ಪೋಲಿಯೋ ನಿರ್ಮೂಲನೆಗಾಗಿ, ಹೋರಾಟ ಪ್ರಾರಂಭವಾಗಿ ದಶಮಾನೋತ್ಸವ ಆಚರಿಸಬೇಕಾಗಿದೆ ಎಂದು ತಿಳಿಸಿದರು.
ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖವಾಗಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ವಸಹಾಯಕರು ಪಾತ್ರ ಪ್ರಮುಖವಾಗಿದ್ದು ಅವರಿಲ್ಲದಿದ್ದರೆ ಇದನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲವೆಂದರು.
ರೋಟರಿ ಸಂಸ್ಥೆ ಅಧ್ಯಕ್ಷರಾದ ಮಂಜುಳಾ ರವರು ಮಾತನಾಡಿ ಸರ್ಕಾರದೊಂದಿಗೆ ರೋಟರಿ ಸಂಸ್ಥೆಯು ಅಂತರರಾಷ್ಟ್ರೀಯ ರೋಟರಿ ನೆರವಿನೊಂದಿಗೆ ಪೋಲಿಯೋ ನಿರ್ಮೂಲನೆಯಲ್ಲಿ ತೊಡಗಿಕೊಂಡಿದ್ದು ವಿಶ್ವದಲ್ಲಿ ಆರೋಗ್ಯ ತರಲು ಎರಡು ಹನಿ ಪೋಲಿಯೋ ಹನಿಯನ್ನು ಮಕ್ಕಳಿಗೆ ಕೊಡಿಸುವಂಥವರಾಗಬೇಕೆಂದು ಇದಕ್ಕಾಗಿ ಕಳೆದ ಎರಡು ದಿನಗಳ ಮುನ್ನವೇ ರೋಟರಿ ಶಾಲಾ ಮಕ್ಕಳಿಂದ ಪಟ್ಟಣದ ಮುಖ್ಯಬೀದಿಗಳಲ್ಲಿ ಪೋಲಿಯೋ ನಿರ್ಮೂಲನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ವಿಮಲಾ ಬಸವರಾಜುರವರು ಮಕ್ಕಳಿಗೆ ಪೋಲಿಯೋ ಹನಿ ನೀಡುವ ಮೂಲಕ ಚಾಲನೆ ನೀಡಿದರು. ಉಪಾಧ್ಯಕ್ಷ ಕೇಶವಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ. ಉದಯ್, ನೇತ್ರ ತಜ್ಞರಾದ ವೀಣಾ, ಫಾರ್ಮಸಿಷ್ಟ ಕುಮುದ, ಬಿಂದು,ಲ್ಯಾಬ್ ಮಂಜುನಾಥ್ ಕಲಾ,ರತ್ನಮ್ಮ ಮತ್ತಿದರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಉಪಸ್ಥಿತರಿದ್ದರು.