ಭಾರತದಲ್ಲಿ ಟಿಬಿ ಆರೈಕೆಗಾಗಿ ಮಾನದಂಡ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಗಾರ

ಕಲಬುರಗಿ:ನ.09: ನಗರದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಕಲಬುರಗಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಲಬುರಗಿ ಇವರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಕಾರ್ಯಗಾರ ಭಾರತದಲ್ಲಿ ಟಿಬಿ ಆರೈಕೆಗಾಗಿ ಮಾನದಂಡಗಳ ಕುರಿತು ತರಬೇತಿ ಕಲಬುರ್ಗಿಯ ವೈದ್ಯಕೀಯ ಕಾಲೇಜು ವೈದ್ಯರಿಗೆ ಸಂವೇದನಾಶೀಲತೆ ಕಾರ್ಯಾಗಾರದಲ್ಲಿ ವೈದ್ಯರು ಭಾಗವಹಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ|| ರಾಜಶೇಖರ ಮಾಲಿ , ಅವರು ಸಸಿಗೆ ನೀರು ಏರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪ್ರತಿಯೊಬ್ಬ ವೈದ್ಯರು ಕೂಡ ಕ್ಷಯರೋಗ ನಿರ್ಮೂಲನಾ ಮಾಡವಲ್ಲಿ ಪ್ರತಿಒಬ್ಬರ ಜವಾಬ್ದಾರಿಯಾಗಿದೆ. ಕ್ಷಯ ಮುಕ್ತ ಭಾರತ ಮಾಡುವ ಪಣ ತೊಡೋಣ ಕ್ಷಯರೋಗಿಗೆ ಉತ್ತಮ ಚಿಕಿತ್ಸೆ ನೀಡಿ ಅವರಿಗೆ ಬೇಕಾಗುವ ಸೇವೆ ಸೌಲಭ್ಯ ಸಿಗುವಂತದಗಾಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಯಾಗಿ ಡಿನ್ ಮುಖ್ಯ ನಿರ್ದೇಶಕರು ಜಿಮ್ಸ್ ಮೆಡಿಕಲ್ ಕಾಲೇಜಿನ ಡಾ. ಕವಿತ ಪಾಟೀಲ್ .

ಎಂ ಎಸ್ ಕಮ್ಯೂನಿಟಿ ಮೆಡಿಕಲ್‌ ಹೆಡ್
ಡಾ. ಮಹಮ್ಮದ್ ಶಫಿಯೋದ್ದಿನ್
ಜಿಲ್ಲಾ ಅಧಿಕ್ಷಕರು ಸರ್ಜನ್ ಡಾ. ಅಂಬಾರಾಯ ರುದ್ರವಾಡಿ . ಅಧ್ಯಕ್ಷತೆ
ಜಿಲ್ಲಾ ಕ್ಷಯರೋಗ ನಿರ್ಮೂಲನಾ
ಡಾ|| ಚಂದ್ರಕಾಂತ ನರಿಬೋಳಿ.
ಡಬ್ಲ್ಯೂ ಹೆಚ್ ಓ ಗಳಾದ ಡಾ. ಸತೀಶ್ ಘಟಗೆ,
ಡಾ. ಸೆಲ್ವಾರಾಜ ಸಿದ್ದಾರ್ಥ.
ನೋಡಲ್ ಡಿಆರ್ ಟಿಬಿ ವೈದ್ಯಾಧಿಕಾರಿ ಡಾ ಮಣಿದೇವಿ .

ಪ್ರಮುಖರಾದ ಡಿಪಿಎಸ್ ಅಬ್ದುಲ್ ಜಬ್ಬರ್, ಡಿಪಿಎಸ್ ಸುರೇಶ ದೊಡ್ಡಮನಿ , ಡಾ. ಅಮರೇಶ ಕೊಳ್ಳೂರು, ಡಾ. ಅವಿನಾಶ್ ಖಸಗೆ.
ಜಿಲ್ಲಾ ಕ್ಷಯರೋಗ ಡಿ ಆರ್ ಟಿಬಿ ಸಮಾಲೋಚಕ
ಮಂಜುನಾಥ ಕಂಬಳಿಮಠ
ಜಿಲ್ಲಾ ಹಿರಿಯ ಆರೋಗ್ಯ ನೀರಿಕ್ಷಾಣಧಿಕಾರಿ ಗುಂಡಪ್ಪ ದೊಡ್ಡಮನಿ,

ಡಿಪಿಎಸ್ ಸುರೇಶ ದೊಡ್ಡಮನಿ ನಿರೂಪಿಸಿದರು , ಜಿಲ್ಲಾ ಪಿ ಪಿ ಎಂ ಸಂಯೋಜಕ ಶಶಿಧರ್ ಪಟ್ನಾಯಕ್ ಸ್ವಾಗತಿಸಿದರು.
ಎಸ್ ಟಿಎಸ್ ಡಾ ಶರಣಬಸಪ್ಪ ಸಜ್ಜನ್ ವಂದಿಸಿದರು. ವೈದ್ಯಕೀಯ
ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.