ಭಾರತದಲ್ಲಿ ಚಿರತೆ ಸಂತತಿ ಶೇ.೬೦ ಹೆಚ್ಚಳ

ನವದೆಹಲಿ,ಡಿ.೨೨: ಭಾರತದಲ್ಲಿ ಚಿರತೆಗಳ ಸಂತತಿ ೨೦೧೪ ರಲ್ಲಿ ಸುಮಾರು ೮೦೦೦ ಸಾವಿರ ಇದ್ದು, ೨೦೧೮ ರ ಅಂಕಿ ಅಂಶಗಳ ಪ್ರಕಾರ ೧೨,೮೫೨ ಕ್ಕೇ ಏರಿಕೆಯಾಗಿದೆ ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಅಲ್ಲದೆ ಪರಿಸರ ಸಚಿವರು ೨೦೧೮ ರ ಚಿರತೆಗಳ ಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಪರಿಸರ ವಿಜ್ಞಾನ ಮತ್ತು ಜೀವ ವೈವಿಧ್ಯತೆಯನ್ನು ಉತ್ತಮವಾಗಿ ರಕ್ಷಣೆ ಮಾಡುತ್ತಿರುವ ಪರಿಣಾಮ ಚಿರತೆಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಹುಲಿ ಹಾಗು ಸಿಂಹಗಳ ಸಂಖ್ಯಾ ವರದಿಯೂ ಇದೇ ರೀತಿ ಬರಲಿದೆ ಎಂದು ಹೇಳಿದ್ದಾರೆ.
ಪರಿಸರ ಸಚಿವರು ಬಿಡುಗಡೆ ಮಾಡಿರುಬಲವ ವರದಿಯ ಪ್ರಮುಖ ಅಂಶಗಳು:
ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನವನ್ನು ಬಳಸಿಕೊಂಡು ಚಿರತೆಗಳ ಜನಸಂಖ್ಯೆಯನ್ನು ಅಂದಾಜಿಸಲಾಗಿದೆ. ೨೦೧೮ ರ ಹೊತ್ತಿಗೆ ಭಾರತದಲ್ಲಿ ೧೨,೮೫೨ ಚಿರತೆಗಳಿವೆ, ಇದು ೨೦೧೪ ರ ವರದಿಗೆ ಹೋಲಿಕೆ ಮಾಡಿಕೊಂಡೇ ೬೦% ಹೆಚ್ಚಾಗಿದೆ. ಭಾರತದಲ್ಲಿ ಚಿರತೆಯ ಹೆಚ್ಚಿನ ಸಾಂದ್ರತೆಯು ಮಧ್ಯಪ್ರದೇಶ (೩,೪೨೧) ಮತ್ತು ನಂತರದ ಸ್ಥಾನದಲ್ಲಿ ಕರ್ನಾಟಕ (೧,೭೮೩) ಮತ್ತು ಮಹಾರಾಷ್ಟ್ರ (೧,೬೯೦) ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ, ಚಿರತೆಗಳು ಕಳೆದ ೧೨೦,೨೦೦ ವರ್ಷಗಳಲ್ಲಿ ಮಾನವ-ಪ್ರೇರಿತ ೭೫-೯೦% ಜನಸಂಖ್ಯೆಯ ಕುಸಿತವನ್ನು ಅನುಭವಿಸಿವೆ. ಭಾರತೀಯ ಉಪಖಂಡದಲ್ಲಿ ಚಿರತೆಗಳನ್ನ ಬೇಟೆಯಾಡುವುದರಿಂದ, ಅವುಗಳ ವಾಸಸ್ಥಾನಗಳಿನ್ನ ಹಾಳು ಮಾಡುವುದರಿಂದ
ನೈಸರ್ಗಿಕ ಬೇಟೆಯ ಸವಕಳಿ ಮತ್ತು ಸಂಘರ್ಷಗಳಿಂದ ಚಿರತೆಯ ಸಂತತಿಗೆ ದೊಡ್ಡ ಬೆದರಿಕೆಗಳಾಗಿವೆ.
ಇವೆಲ್ಲವೂ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) ಜಾತಿಯ ಸ್ಥಿತಿಯನ್ನು ಬೆದರಿಕೆ ದುರ್ಬಲ ಎಂದು ಬದಲಾಯಿಸಲು ಕಾರಣವಾಗಿದೆ. ಪ್ರದೇಶವಾರು ವಿತರಣೆಗೆ ಸಂಬಂಧಿಸಿದಂತೆ, ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳಲ್ಲಿ ಅತಿ ಹೆಚ್ಚು ೮,೦೭೧ ಚಿರತೆಗಳು ಕಂಡುಬಂದಿವೆ.
ಇದರಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಛತ್ತೀಸ್ ಘಡ್, ಜಾರ್ಖಂಡ್, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿವೆ. ಕರ್ನಾಟಕ, ತಮಿಳುನಾಡಿ, ಗೋವಾ ಮತ್ತು ಕೇರಳವನ್ನು ಒಳಗೊಂಡಿರುವ ಪಶ್ಚಿಮ ಘಾಟ್ ಪ್ರದೇಶದಲ್ಲಿ ೩,೩೮೭ ಚಿರತೆಗಳಿವೆ. ಶಿವಾಲಿಕ್ ಮತ್ತು ಗಂಗಾ ಬಯಲು ಪ್ರದೇಶದಲ್ಲಿ ೧,೨೫೩ ಚಿರತೆಗಳಿವೆ, ಇದರಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರ ಸೇರಿವೆ. ಈಶಾನ್ಯ ಬೆಟ್ಟಗಳಲ್ಲಿ ಕೇವಲ ೧೪೧ ಚಿರತೆಗಳಿವೆ.