ಭಾರತದಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ಸಿಕ್ಕಿಲ್ಲ: ಅಶ್ವಿನ್ ಕುಮಾರ್

ಕೆ.ಆರ್.ಪೇಟೆ. ಏ.05: ಯುವಕರು ಹೆಚ್ಚಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿ ಸದೃಢರಾಗಬೇಕು ಎಂದು ರಾಜ್ಯ ಯುವ ಜೆಡಿಎಸ್ ಘಟಕದ ಮಾಜಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ತಿಳಿಸಿದರು.
ಅವರು ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ಫ್ರೆಂಡ್ಸ್ ಗೆಳೆಯರ ಬಳಗ ಏರ್ಪಡಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಯುವಕರು ಹೆಚ್ಚಿನ ಪ್ರಮಾಣದಲ್ಲಿ ವಿವಿಧ ರೀತಿಯ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು. ಎಲ್ಲಾ ಗ್ರಾಮಗಳಲ್ಲಿ ಈ ರೀತಿಯಾದ ಕ್ರೀಡಾಕೂಟಗಳು ನಡೆಯಬೇಕು. ಭಾರತದಂಥಹ ದೊಟ್ಟ ರಾಷ್ಟ್ರದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಹಾಗೂ ಪ್ರೋತ್ಸಾಹ ಸಿಗಬೇಕು. ಚಿಕ್ಕಚಿಕ್ಕ ದೇಶಗಳು ಕಾಮನ್ವೆಲ್ತ್ ಹಾಗೂ ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿ ಹೆಚ್ಚಿನ ಬಹುಮಾನಗಳನ್ನು ಪಡೆಯುತ್ತಿವೆ ಆದರೆ ಭಾರತದಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ಸಿಕ್ಕಿಲ್ಲ. ಇಷ್ಟು ಜನಸಂಖ್ಯೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ತರಬೇತಿ ನೀಡಿದರೆ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಭಾರತ ಸಾಕಷ್ಟು ಸಾಧನೆ ಮಾಡಲಿದೆ. ಆ ಮೂಲಕ ರಾಜ್ಯ, ರಾಷÀ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಪ್ರತಿನಿಧಿಸಿ. ತಾಲ್ಲೂಕಿನ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಬೇಕು. ನಾವು ಸಹ ನಮ್ಮ ಕೈಲಾದಷ್ಟು ಮಟ್ಟಿಗೆ ಕ್ರೀಡಾಪಟುಗಳಿಗೆ ಬೇಕಾದ ಸಹಕಾರವನ್ನು ನೀಡಲು ಸಿದ್ದವಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಬಿಎಲ್ ದೇವರಾಜು ಮಾತನಾಡಿ ಗ್ರಾಮಗಳಲ್ಲಿ ಈ ರೀತಿಯ ಕ್ರೀಡಾ ಚಟುವಟಿಕೆಗಳನ್ನು ಮಾಡುತ್ತಿರುವುದು ಬಹಳ ಸಂತೋಷÀದ ವಿಚಾರ ಕಬಡ್ಡಿ ಭಾರತದಲ್ಲಿ ಜನಪ್ರಿಯ ಆಟವಾಗಿದೆ. ಅಲ್ಲದೇ ನೂರಾರು ವಷರ್Àಗಳ ಇತಿಹಾಸವನ್ನು ಹೊಂದಿದೆ. ಇಂದು ಪ್ರೋಕಬಡ್ಡಿ ಆಟವು ಕ್ರಿಕೆಟ್ ಪಂದ್ಯಕ್ಕೆ ಸರಿಸಮನಾಗಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಯೋಜನೆ ಮಾಡುತ್ತಿದ್ದು ಅವುಗಳನ್ನು ನಾವು ಟಿವಿಗಳಲ್ಲಿ ವೀಕ್ಷಿಸುತ್ತಿದ್ದೇವೆ. ಕಬಡ್ಡಿ ಪಂದ್ಯಾವಳಿ ಸಾಕಷÀ್ಟು ಕುತೂಹಲ ಕೆರಳಿಸುವ ಒಂದು ಪಂದ್ಯಾವಳಿ ಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್, ನಿವೃತ್ತ ಶಿಕ್ಷಕ ರಾಮೇಗೌಡ ಗ್ರಾಮ ಪಂಚಾಯಿತಿ ಸದಸ್ಯೆ ವಿಜಿಯಮ್ಮ, ಆಯೋಜಕರುಗಳಾದ ಜಿತೇಂದ್ರ ಕುಮಾರ್, ಪ್ರಸನ್ನ, ಸುದರ್ಶನ, ಕೇಶವ, ಚಂದ್ರೇಗೌಡ, ಗ್ರಾಮದ ಮುಖಂಡರುಗಳಾದ ಸಿದ್ದಲಿಂಗೇಗೌಡ, ಮಹೇಶ, ರವಿಗೌಡ, ಕೆ.ಟಿ.ಪಾಂಡು, ಸೇರಿದಂತೆ ಗ್ರಾಮಸ್ಥರುಗಳು ಹಾಜರಿದ್ದರು.