ಭಾರತಕ್ಕೆ ಬಿಲ್‌ಗೇಟ್ಸ ಪ್ರಶಂಸೆ

ವಾಷಿಂಗ್ಟನ್, ಜ. ೫-ಭಾರತದ ಎರಡು ಲಸಿಕೆಗಳ ಬಳಕೆಗೆ ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿರುವ ಬೆನ್ನಲ್ಲೇ ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಮೈಕ್ರೋ ಸಾಫ್ಟ್ ದಿಗ್ಗಜ ಬಿಲ್‌ಗೆಟ್ಸ್ ಪ್ರಶಂಸಿದ್ದಾರೆ.
ಭಾರತದಲ್ಲಿ ಉತ್ತಮ ನಾಯಕತ್ವವಿದೆ. ಕೊರೊನಾ ನಿಯಂತ್ರಣಕ್ಕಾಗಿ ಭಾರತ ಕಾರ್ಯನಿರ್ವಹಿಸುತ್ತಿರುವ ಕ್ರಮ ಅತ್ಯುತ್ತಮವಾಗಿದೆ. ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಳ ಮಾಡಲಾಗಿದ್ದು, ಇದು ಉತ್ತಮವಾಗಿದೆ ಎಂದು ಭಾರತದ ಅಧಿಕೃತ ಟ್ವೀmರ್ ಖಾತೆಯನ್ನು ಟ್ಯಾಗ್ ಮಾಡಿ ಬಿಲ್‌ಗೆಟ್ಸ್ ಟ್ವೀಟ್ ಮಾಡಿದ್ದಾರೆ.
ಭಾರತದ ಸ್ವದೇಶಿ ಕಂಪನಿಗಳಾದ ಆಕ್ಸ್‌ಫರ್ಡ್ ಹಾಗೂ ಆಸ್ಟ್ರಾಜನಿಕಾ ಸಂಸ್ಥೆಗಳು ಕೊರೊನಾಗಾಗಿ ಸಿದ್ಧಪಡಿಸಿರುವ ಕೋವಿಡ್ ಸೀಲ್ಡ್ ಲಸಿಕೆ ತುರ್ತು ಬಳಕೆಗೆ ಸರ್ಕಾರ ಅನುಮತಿಸಿದೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುಕೊವಾಕ್ಸಿನ್ ಲಸಿಕೆ ತುರ್ತುಬಳಕೆ ಅನುಮತಿ ನೀಡಿರುವ ಬೆನ್ನಲ್ಲೇ ಬಿಲ್‌ಗೆಟ್ಸ್ ಅವರು ಕೊರೊನಾ ನಿಯಂತ್ರಣಕ್ಕೆ ಭಾರತ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ್ದಾರೆ.