ಭಾರತಕ್ಕೆ ಪಾಕ್ ನಟಿ ಮೆಚ್ಚುಗೆ

ಇಸ್ಲಾಮಾಬಾದ್, ಆ.೨೪-ಚಂದ್ರಯಾನ ೩ ಯಶಸ್ಸಿನ ಕುರಿತು ಪಾಕಿಸ್ತಾನದ ನಟಿಯೊಬ್ಬರು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ ಬಾಹ್ಯಾಕಾಶದಲ್ಲಿ ಇತಿಹಾಸ ಸೃಷ್ಟಿಸಿದೆ.
ಇಸ್ರೋದ ಚಂದ್ರಯಾನ-೩ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಚಂದ್ರಯಾನ-೩ ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿದಿದೆ.
ಇದೀಗ ಪಾಕಿಸ್ತಾನಿ ನಟಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.
ಚಂದ್ರಯಾನ ೩ರ ಯಶಸ್ಸಿನ ಕುರಿತು ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಹಲವು ಸಿನಿಮಾ ನಟರು ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಶ್ಲಾಘಿಸಿ ಟ್ವೀಟ್ ಮಾಡುತ್ತಿದ್ದಾರೆ.
ಇದಲ್ಲದೇ ದೇಶ-ವಿದೇಶಗಳ ಅನೇಕ ಸೆಲೆಬ್ರಿಟಿಗಳು ನಮ್ಮ ದೇಶದ ವಿಜ್ಞಾನಿಗಳ ಪ್ರಯತ್ನವನ್ನು ಶ್ಲಾಘಿಸಿ ಟ್ವೀಟ್ ಮಾಡುತ್ತಿದ್ದಾರೆ. ಅದೇ ರೀತಿ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಅವರು ಚಂದ್ರಯಾನ ೩ ರ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ ಮತ್ತು ಭಾರತಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ, ಅವರು ತಮ್ಮದೇ ಆದ ಪಾಕಿಸ್ತಾನವನ್ನು ಟೀಕಿಸಿದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
ಭಾರತದೊಂದಿಗಿನ ದ್ವೇಷವನ್ನು ಬದಿಗಿಟ್ಟ ಇಸ್ರೋವನ್ನು ಅಭಿನಂದಿಸಲೇಬೇಕು.
ಭಾರತ ಸರ್ಕಾರವು ಭಾರತೀಯ ವಿಜ್ಞಾನಿಗಳಿಗೆ ನೀಡಿದ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು. ಪಾಕಿಸ್ತಾನ ಈಗ ಭಾರತದ ಮಟ್ಟಕ್ಕೆ ಬರಲು ಸಾಧ್ಯವಿಲ್ಲ. ಭಾರತ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಪಾಕಿಸ್ತಾನಿ ನಟಿ ಹೇಳಿದ್ದಾರೆ.
ಅದೇನೇ ಇರಲಿ, ಭಾರತದ ಪ್ರಗತಿ ಬಗ್ಗೆ ನಟಿಯ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.