ಲಾಸ್ ಏಂಜಲೀಸ್, ಮಾ.೧೩- ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯಲ್ಲಿ ಈ ಬಾರಿ ಭಾರತ ಇತಿಹಾಸ ನಿರ್ಮಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ಸೂಪರ್ ಹಿಟ್ ಗೀತೆ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಗರಿ ದೊರೆತಿದೆ.‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯ ಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿದೆ. ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಸಂಬಂಧ ಬೆಳೆದರೆ ಹಾಗೆಯೇ ಉಳಿಯುತ್ತದೆ ಎಂಬ ಸಂದೇಶ ‘ದಿ ಎಲಿಫೆಂಟ್ ವಿಸ್ಪರರ್ಸ್’ನಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಈ ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ್ದಾರೆ.
ಆರ್ ಆರ್ ಆರ್ ಚಿತ್ರದ ‘ನಾಟು ನಾಟು’ ಹಾಡು ಒರಿಜಿನಲ್ ವಿಭಾಗದ ಹಾಡು ಹಾಗೂ ‘ದಿ ಎಲಿಫೆಂಟ್ ವಿಷ್ಪರರ್ಸ್’ ಸಾಕ್ಷ್ಯ ಚಿತ್ರ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ ಕೀರ್ತಿಗೆ ಪಾತ್ರವಾಗಿವೆ.
ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ೯೫ ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರಂಭದಿಂದಲೂ ನಿರೀಕ್ಷೆ ಮೂಡಿಸಿದ್ದ ಮುತ್ತು ಗೋಲ್ಡನ್ ಗ್ಲೋಬ್, ಮತ್ತು ವಿಮರ್ಶಕರ ಪ್ರಶಸ್ತಿ ಪಡೆದು ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದ್ದ ಆರ್ ಆರ್ ಆರ್ ಚಿತ್ರದ ನಾಟು ನಾಟು ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ.
ತೆಲುಗು ನಿರ್ದೇಶಕ ಎಸ್ ಎಸ್ ರೌಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿನಲ್ಲಿ ರಾಮ್ ಚರಣ್ ತೇಜಾ ಮತ್ತು ಜೂನಿಯರ್ ಎನ್ ಟಿಆರ್ ಹಾಡಿಗೆ ಹೆಜ್ಜೆ ಹಾಕಿದ್ದರು. ಎಂಎಂ ಕೀರವಾಣಿ ಸಂಗೀತ ಮತ್ತು ಚಂದ್ರಬೋಸ್ ಸಾಹಿತ್ಯ ಹಾಡಿಗಿದೆ.
ಆಸ್ಕರ್ ಪ್ರಶಸ್ತಿಯನ್ನು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ವೇಳೆ ಎಂ.ಎಂ.ಕೀರವಾಣಿ, ಹಾಡು ಹಾಡಿ ಮತ್ತಷ್ಟು ಗಮನ ಸೆಳೆದರು
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರು ಪಾಲ್ಗೊಂಡು ಸಂತಸದ ಕ್ಷಣಕ್ಕೆ ಸಾಕ್ಷಿಯಾದರು. ಸಭಾಂಗಣದಲ್ಲಿ ಚಪ್ಪಾಳೆಯ ಸದ್ದು ಬಲು ಜೋರಾಗಿತ್ತು. ಭಾರತದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಸಂಭ್ರಮಿಸಿದರು.

ಎದ್ದು ನಿಂತು ಗೌರವ:
ಇದಕ್ಕೂ ಮುನ್ನ ನಾಟು ನಾಟು ಹಾಡನ್ನು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಪರಿಚಯ ಮಾಡಿಕೊಡುತ್ತಿದ್ದಂತೆ ನೃತ್ಯಗಾರರು ಹಾಡಿಗೆ ಹೆಜ್ಜೆ ಹಾಕಿದರು.ಹಾಡು ಮುಗಿಯುತ್ತಿದ್ದಂತೆ ಸಮಾರಂಭದಲ್ಲಿ ನೆರೆದಿದ್ದ ಪ್ರತಿಯೊಬ್ಬರು ಎಂದು ನಿಂತು ಗೌರವ ಸಲ್ಲಿಸಿದರು. ಆಗಲೇ ಹಾಡು ಪ್ರಶಸ್ತಿ ಪಡೆಯುವ ಮುನ್ಸೂಚನೆ ನೀಡಿತ್ತು.ಜನವರಿಯಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಗೆದ್ದಿದ್ದ ನಾಟು ನಾಟುವಿನ ಜಾಗತಿಕ ಪ್ರಾಬಲ್ಯ ಪೂರ್ಣಗೊಂಡಿದೆ. ಈ ಹಾಡನ್ನು ಆಸ್ಕರ್ ಸಮಾರಂಭದಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರು ಹಾಡು ಪ್ರದರ್ಶಿಸಿದರು ಮತ್ತು ಲಾರೆನ್ ಗಾಟ್ಲೀಬ್ ಅವರು ನೃತ್ಯ ಮಾಡಿದರು. ದೀಪಿಕಾ ಪಡುಕೋಣೆ, ಪರ್ಸಿಸ್ ಖಂಬಟ್ಟಾ ಮತ್ತು ಪ್ರಿಯಾಂಕಾ ಚೋಪ್ರಾ ನಂತರ ನಿರೂಪಕಿಯಾಗಿ ಭಾಗವಹಿಸಿದ್ದರು.ಬ್ರಿಟಿಷ್ ಇಂಡಿಯಾದಲ್ಲಿ ಸೆಟ್ಟೇರಿರುವ ಆರ್ ಆರ್ ಆರ್ ನಾಟು ನಾಟು ಹಾಡು ಪ್ರಪಂಚದಾದ್ಯಂತ ಜನರ ಮನಸ್ಸು ಗೆದ್ದಿದೆ. ಲಾಸ್ ಏಂಜಲೀಸ್ ಚಿತ್ರಮಂದಿರದಲ್ಲಿ ದೊಡ್ಡ ಪ್ರದರ್ಶನ ಕಂಡಾಗ ಪ್ರೇಕ್ಷಕರು ನಾಟು ನಾಟುಗೆ ನೃತ್ಯ ಮಾಡಿದರು.
ಉಕ್ರೇನ್‌ನ ಯುದ್ಧಪೂರ್ವದ ಕೈವ್‌ನಲ್ಲಿರುವ ಅಧ್ಯಕ್ಷೀಯ ಭವನದ ಹೊರಗೆ ಚಿತ್ರೀಕರಿಸಲಾದ ಹಾಡು, ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಪಾತ್ರಗಳಾದ ರಾಜು ಮತ್ತು ಭೀಮ್ ಅವರ ಬ್ರಿಟಿಷ್ ಕೌಂಟರ್ಪಾರ್ಟ್‌ಗಳ ನಡುವಿನ ಸಾಂಕ್ರಾಮಿಕ ನೃತ್ಯ ಯುದ್ಧವಾಗಿದೆ. ರಾಜು ಮತ್ತು ಭೀಮ್ ಅವರ ಸಂಕೀರ್ಣ ದಿನಚರಿ ತಮ್ಮ ಎದುರಾಳಿಗಳನ್ನು ಉತ್ತಮಗೊಳಿಸಿದ ನಂತರ, ಕ್ಷಮಿಸಿ ನೃತ್ಯ ಮಾಡುವ ಕೊನೆಯ ಹಾಡಾಗಿ ಚಿತ್ರೀಕರಿಸಲಾಗಿತ್ತು
ಘಟಾನು ಘಟಿ ಹಾಡು ಹಿಂದಿಕ್ಕಿದ ನಾಟು ನಾಟು:
ಆಸ್ಕರ್ ಪ್ರಶಸ್ತಿ ವಿಭಾಗದಲ್ಲಿ ನಾಟು ನಾಟು ಹಾಡು ಲೇಡಿ ಗಾಗಾ ಅವರ ಹೋಲ್ಡ್ ಮೈ ಹ್ಯಾಂಡ್ ಫ್ರಂ ಗನ್: ಮಾವೆರಿಕ್, ರಿಹಾನ್ನಾಸ್ ಲಿಫ್ಟ್ ಮಿ ಅಪ್..ಓಮ್ ಬ್ಲ್ಯಾಕ್ ಪ್ಯಾಂಥರ್ ಸೇರಿದಂತೆ ಮತ್ತಿತರ ಹಾಡು ಹಿಂದಿಕ್ಕಿ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸಿಎಂ ಅಭಿನಂದನೆ
ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಬರುತ್ತಿರುವುದಕ್ಕೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಖಖಖ ಚಿತ್ರ ತಂಡಕ್ಕೆ ಅಭಿನಂದನೆ ಹೇಳಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಟು ನಾಟು ಹಾಡು ಬೆಸ್ಟ್ ವರ್ಜಿನಲ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿರುವುದು ಸಂತಸ ತಂದಿದೆ. ಚಿತ್ರದ ನಿರ್ದೇಶಕ ರಾಜಮೌಳಿ ಅವರಿಗೆ ಅಭಿನಂದನೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದರು.ಈ ನಾಟು ನಾಟು ಹಾಡಿಗೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದು, ಅವರಿಗೂ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಆಸ್ಕರ್ ಪ್ರಶಸ್ತಿಯಿಂದ ಇಡೀ ಜಗತ್ತು ಭಾರತದ ಸಿನಿಮಾಗಳತ್ತ ನೋಡುವಂತಾಗಿದೆ ಹಾಗೂ ನಮ್ಮ ಚಿತ್ರಗಳನ್ನು ಶ್ಲಾಘನೆ ಮಾಡುವಂತಾಗಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.