ಭಾರತಕ್ಕೆ ಇಂಗ್ಲೆಂಡ್ ವೈದ್ಯಕೀಯ ನೆರವು

ದೆಹಲಿ, ಎ.೨೬- ಭಾರತಕ್ಕೆ ಸದ್ಯ ಬೇಕಾಗಿರುವ ಅಗತ್ಯ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಸಾಧ್ಯವಾದ ಎಲ್ಲಾ ರೀತಿ ನೆರವು ನೀಡಲಾಗುವುದು ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಭರವಸೆ ನೀಡಿದ್ದಾರೆ.
ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್ಸ್ ಸೇರಿದಂತೆ ಜೀವ ಉಳಿಸುವ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಸರಬರಾಜು ಮಾಡಲಾಗುವುದು. ಕೋವಿಡ್ -೧೯ ವಿರುದ್ಧದ ಹೋರಾಟದಲ್ಲಿ ನಾವು ಸ್ನೇಹಿತ ಮತ್ತು ಪಾಲುದಾರರಾಗಿ ಭಾರತದ ನೆರವಿಗೆ ಇದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಅಂತಾರಾಷ್ಟ್ರೀಯ ಸಮುದಾಯವನ್ನು ಬೆಂಬಲಿಸಲು ಇಂಗ್ಲೆಂಡ್ ಎಲ್ಲವನ್ನು ಮಾಡುತ್ತದೆ. ಮುಂದಿನ ದಿನಗಳಲ್ಲಿ ನಾವು ಒದಗಿಸಬಹುದಾದ ಹೆಚ್ಚಿನ ಸಹಾಯವನ್ನು ಗುರುತಿಸಲು, ಭಾರತ ಸರ್ಕಾರದೊಂದಿಗೆ ನಾವು ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಎಂದು ಬೋರಿಸ್ ತಿಳಿಸಿದ್ದಾರೆ.