ಭಾರತಕ್ಕೆ ಅಯ್ಯರ್, ಸಾಹ ಆಸರೆ, ಕಿವೀಸ್ ಗೆಲುವಿಗೆ 284 ರನ್ ಗುರಿ

ಕಾನ್ಪುರ, ನ.28- ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜೆಲೆಂಡ್ ತಂಡಗಳ ನಡುವಣ ಮೊದಲ ಪಂದ್ಯದಲ್ಲಿ ಆಜಿಂಕ್ಯಾ ರಹಾನೆ ಪಡೆ ಬಿಗಿ ಹಿಡಿತ ಸಾಧಿಸಿದೆ.
ಈ ಪಂದ್ಯ ಗೆಲ್ಲಲು ಪ್ರವಾಸಿ ತಂಡಕ್ಕೆ 284 ರನ್ ಗುರಿಯನ್ನು ನೀಡಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ನಾಲ್ಕು ರನ್ ಗೆ ಒಂದು ವಿಕೆಟ್ ಕಳೆದು ಕೊಂಡಿದೆ. ಅಂತಿಮ ದಿನದ ಆಟ ಮಾತ್ರ ಬಾಕಿ‌ ಉಳಿದಿದ್ದು, ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಒಂದು ಹಂತದಲ್ಲಿ 51 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ರು. ಈ ವೇಳೆ ಶ್ರೇಯಸ್ ಅಯ್ಯರ್ ಮತ್ತು ವೃದ್ದಿಮಾನ್ ಸಾಹ ತಂಡಕ್ಕೆ
ಆಸರೆಯಾದರು.
ಮೊದಲ ಪಂದ್ಯದಲ್ಲಿ ಶತಕ‌ ಸಿಡಿಸಿದ್ದ ಶ್ರೇಯಸ್ ಅಯ್ಯರ್ ಎರಡನೇ ಇನ್ನಿಂಗ್ಸ್‌ನಲ್ಲಿ 65 ರನ್ ಗಳಿಸಿದರು.‌ ವೃದ್ದಿಮಾನ್ ಸಾಹ ಅಜೇಯ 61 ರನ್ ಗಳಿಸಿದರು.
ಅರ್ .ಅಶ್ವಿನ್ 32 ಹಾಗೂ ಅಕ್ಷರ್ ಪಟೇಲ್ ಔಟಾಗದೆ 28 ರನ್ ಗಳಿಸಿ ಸವಾಲಿನ ಮೊತ್ತ ದಾಖಲಿಸಿತು. ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದ್ದಾಗ ನಾಯಕ ಅಜಿಂಕ್ಯಾ ರಹಾನೆ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಕಿವೀಸ್ ಪರ ಟಿಮ್ ಸೌದಿ ಹಾಗೂ ಜಾಮಿಸನ್ ತಲಾ ಮೂರು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ಒತ್ತಡಕ್ಕೆ ಸಿಲುಕಿದ್ದು ಆರಂಭದಲ್ಲೇ ವಿಲ್ ಯಂಗ್ ಅವರ ವಿಕೆಟ್ ಕಳೆದುಕೊಂಡಿದೆ. ಯಂಗ್ ಕೇವಲ ಎರಡು ರನ್ ಗಳಿಸಿ ಅಶ್ವಿನ್ ಬೌಲಿಂಗ್ ನಲ್ಲಿ ಔಟಾದರು. ಟಾಮ್ ಲಾದಂ ವಿಲಿಯಂ ಸೋಮರ್ ವಿಲ್ಲೆ ಆಡುತ್ತಿದ್ದಾರೆ. ಒಟ್ಟಾರೆ ಅಂತಿಮ‌‌‌ ದಿನದ ಆಟ ಬಾಕಿ ಉಳಿದಿದ್ದು ಕಿವೀಸ್ ಗೆ ಸೋಲಿನ ಭೀತಿಗೆ ಸಿಲುಕಿದೆ.