ಭಾನುವಾರ ವಿಶೇಷ ಉಪನ್ಯಾಸ


ಸತ್ತೂರು,ಮೇ.10: ಶಂಕರ ಜಯಂತಿಯ ನಿಮಿತ್ತ , ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ಉದಯಗಿರಿ ಎರಡನೇ ಸ್ಟಾಪಿನ ಹತ್ತಿರ ಇರುವ ರವೀಂದ್ರ ದೇಸಾಯಿ ಇವರ ಮನೆಯಲ್ಲಿ ಬರುವ ಭಾನುವಾರದಂದು ಅಂದರೆ ದಿನಾಂಕ 12.05.2024 ರಂದು ಸಾಯಂಕಾಲ 6-00 ರಿಂದ 7-00ರ ವರೆಗೆ ಶ್ರೀ ಶಂಕರಾಚಾರ್ಯರ ಜೀವನ ಮತ್ತು ಸಂದೇಶ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಯಾಗಿ ಕುಮಟಾದ ಬಾಳಿಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ವಿಶ್ವನಾಥ ಹಂಪಿಹೊಳಿ ಅವರು ಆಗಮಿಸಲಿದ್ದಾರೆ.
ಇದಕ್ಕೂ ಪೂರ್ವ ನಾರಾಯಣಿ ಭಜನಾ ಮಂಡಳಿ ಅವರಿಂದ ಸಾಯಂಕಾಲ 5ರಿಂದ 6ರ ವರೆಗೆ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 63 61 83 57 10ನ್ನು ಸಂಪರ್ಕಿಸಲು ಕೋರಲಾಗಿದೆ.