ಭಾನುವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ

ಶಹಾಪುರ:ಮಾ.31:ಸಪ್ತಗಿರಿ ಆಸ್ಪತ್ರೆ ಬೆಂಗಳೂರ ಮತ್ತು ಡಿಡಿಯು ಶಿಕ್ಷಣ ಸಂಸ್ಥೆ ಶಹಾಪುರ ಆಶ್ರೆಯದಲ್ಲಿ ಇದೇ ಭಾನುವಾರದಂದು ತಾಲೂಕಿನ ಸಗರದ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಷಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು. ಹೃದಯ, ನರರೋಗ, ಮೂತ್ರಪಿಂಡ ಸೇರಿದಂತೆ ಇತರೆ ಸಾಮಾನ್ಯ ಕಾಯಲೆಗಳಿಗೆ ತಪಾಸಣೆ ಮಾಡುವದರ ಮುಖಾಂತರ ಗ್ರಾಮೀಣ ಪ್ರದೇಶ ಜನ ಸಾಮಾನ್ಯರಿಗೆ ಅನೂಕೂಲ ಕಲಿಸಿಕೊಡಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ ಪತ್ರಿಕೆಗೆ ತಿಳಿಸಿದ್ದಾರೆ.

ಈ ತಪಾಸಣೆಯಿಂದ ಕಾಯಿಲೆ ಕಂಡು ಬಂದಲ್ಲಿ ಸಪ್ತಗಿರಿ ಆಸ್ಪತ್ರೆಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುತ್ತಿದ್ದು ತಮ್ಮ ಇತ್ತಿಚಿನ ಪಡಿತರ ಕಾರ್ಡ, ಆದಾರ ಕಾರ್ಡ ಝರಾಕ್ಷ ಪ್ರತಿಗಳನ್ನು ರೋಗಿಗಳು ಪ್ರಸ್ತುತಪಡಿಸಬೇಕು. ಅಲ್ಲದೆ ಬೆಂಗಳೂರಿಗೆ ಹೋಗಿ ಬರುವ ಪ್ರಯಾಣ ವೆಚ್ಚವನ್ನು ಉಚಿತವಾಗಿ ಎರ್ಪಡಿಸಲಾಗಿದೆ. ಅಂದು ಸಗರ ಸೇರಿದಂತೆ ಅಕ್ಕಪಕ್ಕದ ತಾಲೂಕು ಮತ್ತು ಹೊಬಳ್ಳಿ, ನಗರ ಪ್ರದೇಶದ ಜನರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಶಿಬಿರಕ್ಕೆ ಬರವಾಗ ಪ್ರತಿಯೊಬ್ಬರು ಬಿಪಿಎಲ್ ಕಾರ್ಡ ಕಡ್ಡಾಯವಾಗಿ ತರಬೆಕು. ಸ್ರ್ರೀ ರೋಗಳಿಗೂ ತಪಾಷಣೆ ಕೈಗೊಳ್ಳಲಾಗುತ್ತಿದೆ. ಬಿಪಿ, ಇಸಿಜಿ, 2ಡಿ ಎಕೋ. ಸ್ಕ್ಯಾನಿಂಗ, ಉಚಿತವಾಗಿ ಮಾಡಲಾಗುತ್ತದೆ. ತಪ್ಪದೆ ಹಳ್ಳಿಯಲ್ಲಿ ನಾನಾ ರೋಗಬಾದೆಗಳಿಂದ ಬಳಲುತ್ತಿದ್ದರೆ ರಕ್ಷಣೆ ಭಾನುವಾರದಂದು ಹಾಜರಾಗಿ ಆರೋಗ್ಯತಪಾಷಣೆಗೆ ಬಾಗವಹಿಸಬೆಕು ಎಂದು ಡಾ. ಭೀಮಣ್ಣ ಮೇಟಿ ಅವರು ಪತ್ರಿಕೆ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.