ಭಾಜಪ ದಲ್ಲಿ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನು ಸಹ ಉನ್ನತ ಹುದ್ದೆ ಪಡೆಯಬಹುದು

ಗುರುಮಠಕಲ್:ಜು.23:ದ್ರೌಪದಿ ಮುರ್ಮು ಅವರು ನೂತನ ರಾಷ್ಟ್ರಪತಿ ಯಾಗಿ ಆಯ್ಕೆ ಹಿನ್ನೆಲೆಯಲ್ಲಿ ಭಾಜಪ ಕಾರ್ಯಕರ್ತರು ಸಿಹಿನೀರಿನಬಾವಿ ಮತ್ತು ಬಸ್ ನಿಲ್ದಾಣದ ಹತ್ತಿರ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈಸಂರ್ದಬದಲ್ಲಿ ಮಂಡಲ ಅಧ್ಯಕ್ಷ ರಾದ ಮಲ್ಲಿಕಾರ್ಜುನ ಹೊನಗೇರ ಅವರು ಮಾತನಾಡಿ ಒಬ್ಬ ಬುಡಕಟ್ಟು ಜನಾಂಗದ ಆದಿವಾಸಿ ಮಹಿಳೆ ನಮ್ಮ ದೇಶದ ರಾಷ್ಟ್ರ ಪತಿ ಆಗುತ್ತಿದ್ದರೆ ಅಂದರೆ ಇಂದಿನ ದಿನವನ್ನು ಇತಿಹಾಸ ದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವಂತ ದಿನ ವೆಂದು ತಮ್ಮ ಸಂತೋಷ ವನ್ನು ವೆಕ್ತ ಪಡಸಿದರು. ಆದಿವಾಸಿ ಜನರನ್ನು ಅಭಿವೃದ್ಧಿ ಪಡಿಸಲು ದ್ರೌಪದಿ ಮುರ್ಮು ಅವರ ಹೆಸರನ್ನು ಭಾರತೀಯ ಜನತಾ ಪಕ್ಷವು ಘೊಷಣೆಮಾಡಿ ಇಂದು ಅವರನ್ನು ರಾಷ್ಟ್ರಪತಿಯಾಗಿ ಮಾಡಿದ್ದು ಬಹು ಸಂತೋಷ ಸಂಗತಿ ಇಂತಹ ಒಂದು ಭಾಜಪ ಪಷ್ಕದಲ್ಲಿ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನು ಸಹ ಉನ್ನತ ಹುದ್ದೆ ಪಡೆಯಬಹುದು ಎಂಬುದಕ್ಕೆ ಇದುವೆ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು ಬಿಜೆಪಿ ಎಂಬುದು ಇದಕ್ಕೆ ಸಾಕ್ಷಿಯಾಗಿದೆ ಬಿಜೆಪಿ ಪಕ್ಷವು ಬಡವರಲ್ಲಿ ಅತಿ ಬಡವರ ಪರವಾಗಿ ಸದಾ ಇರುತ್ತದೆ ಎಂದು ಮತ್ತೂಮ್ಮೆ ಸಾಭಿತು ಪಡಿಸಿದರ ಎಂದು ಇ ಸಂದರ್ಭದಲ್ಲಿ ಚಂದುಲಾಲ್ ಚೌಧರಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂರ್ದಬದಲ್ಲಿ ಪ್ರವೀಣ ಕಾಕಲವಾರ. ರವಿಂದ್ರ ರೆಡ್ಡಿ ಪೆÇೀತುಲ್. ರಾಜೇಂದ್ರ ಕಲಾಲ್. ವೆಂಕಟಪ್ಪ ಅವಂಗಪೂರ. ರಮೇಶ್ ತಾಂಡುರ್ಕರ್. ಬಸವಂತರಾಜ ನಿರೇಟಿ. ಬಸವರಾಜ ನೆಲೋಗಿ. ಅಜಯ್ ಕಲ್ಯಾಣಕರ್. ಸಂತೋಷ ಕುಮಾರ್ ನೀರೆಟಿ. ನರೇಶ್ ಮುದಿರಾಜ್. ಚನ್ನಪ್ಪ ಕಾಕಲವಾರ. ಶಾಮಪ್ಪ ಚಂಡ್ರಿಕಿ. ಮಾದವರೆಡ್ಡಿ ಚಂಡ್ರಿಕಿ. ಹರ್ಷವರ್ಧನ ರೆಡ್ಡಿ ಚಂಡ್ರಿಕಿ. ನರಸಿಮುಲು ನೀರೆಟಿ. ನರಸಪ್ಪ ಬೇಡರ್. ಶಂಕರ್ ಕಂದಕೂರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರು ಇದ್ದರು.