ಭಾಜಪ ಕಾರ್ಯಲಯದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಬೀದರ, ಫೆ.01ಃ ಭಾರತೀಯ ಜನತಾ ಪಾರ್ಟಿಯ ಬೀದರನಲ್ಲಿರುವ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.

ಪಕ್ಷದ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಅವರು ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಚಿದ್ರಿ, ಕಾರ್ಯಲಯ ಕಾರ್ಯದರ್ಶಿ ರಾಜಕುಮಾರ ಪಾಟೀಲ ನೆಮತಾಬಾದ, ಚಂದ್ರಶೇಖರ ಗಾದಾ, ರೋಷನ ವರ್ಮಾ, ನೀತಿನ ಕರ್ಪೂರ, ಗಣೇಶ ಭೋಸ್ಲೆ, ಶ್ರೀಕಾಂತಿ ಮೋದಿ, ಗೋಪಾಲ, ವಿರೂ ದಿಗ್ವಾಲ್, ಬಸವರಾಜ ಜೋಜನಾ, ಶ್ರೀನಿವಾಸ ಚೌಧರಿ, ಮಹಾನಂದ ಪಾಟೀಲ, ಹೇಮಲತಾ ಜೋಶಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.