ಭಾಜಪಾ ಸಂಸ್ಥಾಪನಾ ದಿನಾಚರಣೆ

ಔರಾದ :ಏ.7: ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಸಂಸ್ಥಾಪನಾ ದಿನದ ನಿಮಿತ್ಯ ಔರಾದ ಮಂಡಲದ ಬೂತ್ ಮಟ್ಟದ ಕಾರ್ಯಕರ್ತರ ಮನೆ ಮೇಲೆ ಭಾರತೀಯ ಜನತಾ ಪಕ್ಷದ ಧ್ವಜ ಹಾರಿಸುವ ಮೂಲಕ ಸಂಸ್ಥಾಪನಾ ದಿನ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ನಡೆದು ಬಂದ ದಾರಿ ಅದರ ತತ್ವ ಸಿದ್ಧಾಂತ ಮತ್ತು ಪಕ್ಷವನ್ನು ಬೆಳೆಸಿದ ಮಹಾನ್ ಸಾಧಕರ ಕುರಿತು ಉಪನ್ಯಾಸ ನೀಡಲಾಯಿತು. ವಡಗಾಂವ ಗ್ರಾಮದಲ್ಲಿ ಗ್ರಾಮದ ಹಿರಿಯರನ್ನು ಗೌರವಿಸಲಾಯಿತು ಹಾಗೂ ಔರಾದ ಮಂಡಲದ ವಿವಿಧ ಸುಮಾರು ಬೂತ್ ಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಖೂಬಾ ಹಾಗೂ ಜಿಲ್ಲಾ ಯುವ ಮೋಚ್೯ ಕಾರ್ಯದರ್ಶಿ ಬಸವರಾಜ ಹಳ್ಳೆ ತಾಲ್ಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಟೀಲ, ಆನಂದ ದ್ಯಾಡೆ, ಸಂತೋಷ ಫೂಲಾರಿ , ಬಸವರಾಜ ಸೋಮುರೆ ಪ್ರವೀಣ ಬುಟ್ಟೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.