ಭಾಜಪಾ ರೈತ ಮೋರ್ಚಾ ನೂತನ ಪದಾಧಿಕಾರಿಗಳ ಸಭೆ

ಬೀದರ:ಡಿ.28: ನಗರ ರೈತ ಮೋರ್ಚಾದ ವತಿಯಿಂದ ದಿನಾಂಕ: 25-12-2020 ರಂದು ಬೀದರ ಭಾಜಪಾ ಜಿಲ್ಲಾ ಕಚೇರಿಯಲ್ಲಿ ರೈತ ಮೋರ್ಚಾ ನೂತನ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ರಾಜ್ಯ ಕಾರ್ಯಕರಣಿ ಸದಸ್ಯರಾದ ಕುಶಾಲ ಪಾಟೀಲ್ ಗಾದಗಿ ಅವರು ನಗರ ರೈತ ಮೋರ್ಚಾ ಕಾರ್ಯಕರ್ತರನ್ನು ಉದ್ದೇಶಿಸಿ ಕೇಂದ್ರದಿಂದ ಮಂಡಿಸಿದ 3 ಕಾಯಿದೆ ಬಗ್ಗೆ ಮಾತನಾಡಿದರು ಈ ಕಾಯಿದೆ ರೈತರ ಪರವಾಗಿದ್ದು ಈ ಕಾಯಿದೆ ಇದ್ದ ಅಂಶಗಳು ಮನೆ ಮನೆಗೆ ತರೆಳಿ ರೈತರಿಗೆ ಮುಟ್ಟಿಸಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವತ್ತೂ ರೈತರ ಪರವಾಗಿದೆ ಇಂಥ ಪರಿಸ್ಥಿತಿಯಲ್ಲೂ 9 ಕೋಟಿ ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡಿದ್ದು ಸ್ಮರಿಸಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪಯಿ ಅವರ ಹುಟ್ಟು ಹಬ್ಬ ನಿಮಿತ್ಯ ಭಾವಚಿತ್ರಕ್ಕೆ ಮಲಾರ್ಪಣೆ ಮಾಡಲಾಯಿತು. ಹಾಗೂ ರೈತ ದಿನಾಚಾರಣೆ ನಿಮತ್ಯ ಸಭೆ ಮಾಡಲಾಯಿತು.
ನಗರಾಧ್ಯಕ್ಷರಾದ ಹಣಮಂತ ಬುಳ್ಳಾ, ನಗರ ಪ್ರಧಾನ ಕಾರ್ಯದರ್ಶಿಗಳಾದ ಅನೀಲ ರಾಜಗೀರಾ, ನಗರ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ ಗೌಳಿ, ರೈತ ಮೋರ್ಚಾ ನಗರ ಅಧ್ಯಕ್ಷರಾದ ಸಂತೋಷ ಪಾಟೀಲ, ರೈತ ಮೋರ್ಚಾ ಉಸ್ತುವಾರಿ ವಹಿಸಿರುವ ಮಹೇಶ ಕುಲಕರ್ಣಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕುಶಾಲ ಪಾಟೀಲ ಗಾದಗಿ, ರೈತ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಗಡ್ರೆ, ರೈತ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತಳಘಾಟ, ನಗರ ಮಂಡಲ ಕಾರ್ಯದರ್ಶಿಗಳಾದ ದೀಪಕ ಠಾಕೂರ ಇವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.