ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ ಸದುಪಯೋಗ ಪಡೆದುಕೊಳ್ಳಿ : ಶ್ರೀಮಂತ ಪಾಟೀಲ

ಕಾಗವಾಡ : ಅ.30:ಸಮಾಜದಲ್ಲಿ ಹೆಣ್ಣಿಗೆ ಸ್ಥಾನ ಮಾನ, ಗೌರವ ದೊರೆಯಲಿ ಹಾಗೂ ಹೆಣ್ಣು ಹೆತ್ತ ಪಾಲಕರಿಗೆ ಪೆÇ್ರೀತ್ಸಾಹಿಸುವಗೋಸ್ಕರ ಹೆಣ್ಣು ಮಗು ಜನ್ಮ ತಾಳುವ ಮೊದಲೇ ಭ್ರೂಣ ಹತ್ಯೆ ಮಾಡುವ ಪರಿಪಾಠವನ್ನು ತಡೆಯುವಗೋಸ್ಕರ, ಕರ್ನಾಟಕ ಸರ್ಕಾರ ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಶಾಸಕ ಶ್ರೀಮಂತ ಪಾಟೀಲ ಕರೆ ನೀಡಿದರು.
ಅವರು ಶನಿವಾರ ದಿ. 29 ರಂದು ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಫರೀದಖಾನವಾಡಿಯ ಕಟಗೇರಿ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾಡಳಿತ ಹಾಗೂ ಶಿಶು ಅಭಿವೃದ್ಧಿ ಯೋಜನೆ ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪಾಸ್‍ಬುಕ್ ವಿತರಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ ಹೆಣ್ಣು ತಾಯಿಯಾಗಿ ಬೇಕು, ಸಹೋದರಿಯಾಗಿ ಬೇಕು, ಹೆಂಡತಿಯಾಗಿ ಬೇಕು ಆದರೆ ಮಗಳು ಯಾಕೆ ಬೇಡ. ಸಮಾಜದಲ್ಲಿ ಹೆಣ್ಣು ಮಗುವಿಗೆ ಇಷ್ಟೊಂದು ತಾತ್ಸರ ಭಾವನೆ ಯಾಕೆ ಎಂದು ಪ್ರಶ್ನಿಸಿದರು. ಗಂಡು ಹೆಣ್ಣಿನ ಅನುಪಾತವನ್ನು ಸಮಗೊಳಿಸುವಗೋಸ್ಕರ, ಸಮಾಜದಲ್ಲಿ ಹೆಣ್ಣು ಮಗವಿನ ಬಗ್ಗೆ ತಾತ್ಸಾರ ಭಾವನೆ ಹೊಡೆದೊಡಿಸುವಗೋಸ್ಕರ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು. ಸುಮಾರು ಕಾಗವಾಡ ವಲಯದಲ್ಲಿ 499 ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಪಾಸ್‍ಬುಕ್‍ನ್ನು ವಿತರಿಸಲಾಯಿತು. ಅಲ್ಲದೇ ಕಾಗವಾಡ ವಲಯದ ಎಲ್ಲ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ದೀಪಾವಳಿಯ ಹಬ್ಬದ ಅಂಗವಾಗಿ ಶ್ರೀಮಂತ ಪಾಟೀಲ ಫೌಂಡೇಶನ ವತಿಯಿಂದ ಸಿಹಿ ತಿಂಡಿಗಳ ಕಿಟ್‍ಗಳನ್ನು ಶಾಸಕರು ವಿತರಿಸಿದರು.
ಈ ಸಮಯದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂಜೀವಕುಮಾರ ಸದಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಬಿಜೆಪಿ ಕಾಗವಾಡ ಬ್ಲಾಕ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ರಾಜೇಂದ್ರ ಪೆÇೀತದಾರ, ಮಹಾದೇವ ಕಟಗೇರಿ, ಪ್ರಕಾಶ ಥೋರುಸೆ, ಪ್ರತಾಪ ಜತ್ರಾಟ, ರಾಜು ಪಾಟೀಲ, ಸುಜಯ ಪರಾಕಟೆ, ರಾಕೇಶ ಪಾಟೀಲ, ಸುಭಾಷ ಕುರಾಡೆ, ಲಕ್ಷ್ಮಣ ಕಟಗೇರಿ, ಮಹಾದೇವ ನಾಯಿಕ ಸೇರಿದಂತೆ ವಲಯದ ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಶಿಕ್ಷಕಿಯರು, ಫಲಾನುಭವಿಗಳು ಅಪಾರ ಸಂಖ್ಯೆಯಲ್ಲಿ ಇದ್ದರು.
ಜಿ.ಎಂ.ಸಡ್ಡಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.